Viral Video: ಸಾವಿರಾರು ಜನರ ಮುಂದೆ ಪ್ರಪೋಸ್ ಮಾಡಿದ ಹುಡುಗ, ನೋ ಎಂದ ಹುಡುಗಿ; ಮುಂದೇನಾಯ್ತು? ವಿಡಿಯೋ ನೋಡಿ
ಇಂತಹ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮೊದಲು ಹುಡುಗಿಯ ಅಥವಾ ಹುಡುಗನ ಮನಸ್ಸು ಅರ್ಥಮಾಡಿಕೊಳ್ಳಬೇಕು. ಅದರಲ್ಲೂ ಇಷ್ಟು ದೊಡ್ಡ ಪ್ರೇಕ್ಷಕರ ಮುಂದೆ ಹೀಗೆ ಮಾಡುವಾಗ ತುಂಬಾ ಯೋಚಿಸಬೇಕು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಸರಿಯಾದ ಮದುವೆ ಪ್ರಪೋಸಲ್ ಹೇಗಿರಬೇಕು? ಇದಕ್ಕೆ ಹೀಗೇ ಇರಬೇಕು ಎಂದು ಯಾವ ಉತ್ತರವೂ ಇಲ್ಲ. ಆದರೆ, ಖಂಡಿತವಾಗಿ ವಿಶೇಷವಾಗಿ ಇರಬೇಕು. ಕನಸಿನಂತೆ ಇರಬೇಕು. ಎಲ್ಲೂ ಯಾರೂ ಮಾಡದಂತೆ ಹೊಸತಾಗಿ ಇರಬೇಕು ಎಂದು ಮಾತು ಕೇಳಿಬರುವುದು ಸಾಮಾನ್ಯ ಮತ್ತು ಸಹಜ. ಅದಕ್ಕಾಗಿ ಹುಡುಗ ಅಥವಾ ಹುಡುಗಿ ಬಹಳಷ್ಟು ಕಷ್ಟಪಡುವುದು ಇದೆ. ಪ್ರಪೋಸ್ ಅದ್ಭುತವಾಗಿರಬೇಕು, ಎಂದೂ ಮರೆಯದಂತೆ ಎಂದು ಯೋಚಿಸುತ್ತಾರೆ.
ಪ್ರಪೋಸ್ನ ನಂತರ ಏನಾಗುತ್ತೆ? ಪ್ರಪೋಸ್ ಒಪ್ಪಿಗೆ ಆಗುತ್ತಾ? ಇಲ್ವಾ? ಇದೆಲ್ಲಾ ಮೊದಲೇ ಊಹಿಸಬಹುದಷ್ಟೆ. ಆದರೆ, ಖಂಡಿತವಾಗಿ ಹೇಳಲಾಗುವುದಿಲ್ಲ. ಆದರೆ, ಪ್ರಪೋಸ್ ಮಾಡಿದ್ದು ಹೇಗಿರಬೇಕು ಅಂದ್ರೆ ಪ್ರಪೊಸಲ್ ಪಡೆದವರು ಇಲ್ಲ ಅಂತ ಹೇಳಲೇಬಾರದು ಅಂದುಕೊಂಡಿರುತ್ತಾರೆ. ಕೊನೆಯ ಕ್ಷಣದಲ್ಲಿ ಏನೂ ಅನರ್ಥ ಆಗಬಾರದು ಎಂದೂ ಪ್ರಪೋಸ್ ಮಾಡುವ ಮೊದಲು ಹತ್ತು ಸಲ ಯೋಚಿಸಿರುತ್ತಾರೆ.
ಅಂಥ ವಿಶೇಷ ಪ್ರಪೋಸ್ ಘಟನೆಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. What the World ಎಂಬ ಇನ್ಸ್ಟಾಗ್ರಾಂ ಪೇಜ್ನಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಕಂಡುಬಂದಂತೆ, ಹುಡುಗ ಮೊಣಕಾಲಿನಲ್ಲಿ ಕೂತು ಹುಡುಗಿಗೆ ಪ್ರಪೋಸ್ ಮಾಡುತ್ತಾನೆ. ಅದೂ ಕೂಡ ಎಲ್ಲಿ ಅಂತೀರಾ? ಬೇಸ್ಬಾಲ್ ಪಂದ್ಯದ ಮಧ್ಯೆ, ಮೈದಾನದಲ್ಲಿ. ಈ ಘಟನೆಗೆ ಸಾಕ್ಷಿಯಾದವರು ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು! ಹೌದು. ಅವರೆಲ್ಲಾ ಈ ಪ್ರಪೋಸ್ ಸಂದರ್ಭವನ್ನು ಚಿಯರ್ ಮಾಡಿದ್ದಾರೆ.
View this post on Instagram
ಆದರೆ, ಈ ಘಟನೆ, ಸಂಭ್ರಮ, ಸಂತೋಷ ಹೆಚ್ಚು ಹೊತ್ತು ಉಳಿಯಲಿಲ್ಲ. ಮುಂದೇನಾಗಿದೆ ಗೊತ್ತಾ? ಹುಡುಗಿ ತಲೆ ಅಲ್ಲಾಡಿಸಿ ಪ್ರಪೋಸ್ಗೆ ‘ನೊ’ ಎಂದು ಹೇಳಿದ್ದಾಳೆ. ಇದರಿಂದ ಹುಡುಗನಿಗೆ ಮಾತ್ರ ಹೇಗಾಗಿರಬಹುದು?! ಈ ಘಟನೆಯಿಂದ ಹುಡುಗಿಗೆ ಎಷ್ಟು ಮುಜುಗರ ಉಂಟಾಗಿದೆ ಅಂದರೆ, ಬೃಹತ್ ವಿಧಾನದ ಪ್ರಪೋಸಲ್ ಬಂದು, ನೊ ಅಂದಕೂಡಲೇ ಅಲ್ಲಿಂದ ಆಚೆಗೆ ಓಡಿದ್ದಾಳೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂತಹ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮೊದಲು ಹುಡುಗಿಯ ಅಥವಾ ಹುಡುಗನ ಮನಸ್ಸು ಅರ್ಥಮಾಡಿಕೊಳ್ಳಬೇಕು. ಅದರಲ್ಲೂ ಇಷ್ಟು ದೊಡ್ಡ ಪ್ರೇಕ್ಷಕರ ಮುಂದೆ ಹೀಗೆ ಮಾಡುವಾಗ ತುಂಬಾ ಯೋಚಿಸಬೇಕು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಸಾರ್ವಜನಿಕವಾಗಿ ಪ್ರಪೋಸ್ ಮಾಡುವುದು ಬಹಳ ರಿಸ್ಕು ಎಂದು ಕೆಲವರು ಹೇಳಿದ್ದಾರೆ.
ಇದನ್ನೂ ಓದಿ: Viral Video: ಪುಟ್ಟ ಮಗುವಿನ ಸಮೀಪ ಸುಳಿಯಲು ಯತ್ನಿಸಿದ ಕಾಳಿಂಗ ಸರ್ಪ; ಸ್ವಲ್ಪದರಲ್ಲೇ ತಪ್ಪಿದ ಅನಾಹುತ -ವಿಡಿಯೋ ನೋಡಿ
Viral Video: ವಿದೇಶಿ ಮಗುವಿನ ಬಾಯಲ್ಲಿ ನಮಸ್ತೇ ಇಂಡಿಯಾ! ವಿಡಿಯೋ ನೋಡಿ ದೃಷ್ಟಿ ತೆಗೆದ ಭಾರತೀಯರು