ಸೋಂಕಿತರು ರೆಮ್‌ಡೆಸಿವರ್ ಇದ್ರೆ ಮಾತ್ರಾ ಬದುಕುತ್ತೀವಿ ಅನ್ನೋದನ್ನ ಬಿಡಬೇಕು.. ಇಂಜೆಕ್ಷನ್ ಕೊಡುವುದನ್ನ ವೈದ್ಯರು ನಿರ್ಧರಿಸುತ್ತಾರೆ


ವಿಜಯಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿಕೆ. 13 ಟನ್ ಎಂಎಲ್‌ಸಿ ಆಕ್ಸಿಜನ್‌ನ್ನ ವಿಜಯಪುರ ಜಿಲ್ಲೆಗೆ ತರ್ತಿದ್ದೇವೆ ಇಂದು ಟ್ಯಾಂಕರ್ ಬರುತ್ತೆ. ಬೆಂಗಳೂರು, ಇತರೆ ಕಡೆಗಳಲ್ಲಿ ಆಕ್ಸಿಜನ್ ದಾನಿಗಳಿದ್ದರೇ ಹುಡುಕುತ್ತಿದ್ದೇವೆ. ಯಾರಾದ್ರು ಆಕ್ಸಿಜನ್ ಕಳಿಸಿಕೊಡುವವರಿದ್ದರೇ ಅಂತವರನ್ನು ನೋಡ್ತಿದ್ದೀವಿ. ಅಂತವರು ಯಾರೇ ಇದ್ದರು ಮುಂದೆ ಬಂದು ಕೈ ಜೋಡಿಸಲಿ.

ಜಿಲ್ಲಾಸ್ಪತ್ರೆಯಲ್ಲಿ ರೆಮ್‌ಡಿಸಿವರ್ ಇಂಜೆಕ್ಷನ್ ಕೊರತೆ ಇಲ್ಲ. ರೋಗಿ ಕಡೆಯವರಿಂದ ರೆಮ್‌ಡಿಸಿವರ್ ಗಾಗಿ ಬೇಡಿಕೆ ಬಹಳ ಬರ್ತಿದೆ. ಖಾಸಗಿ ಆಸ್ಪತ್ರೆಯಿಂದಲು ಬೇಡಿಕೆ ಬರ್ತಿದೆ. ರೋಗಿಗಳು ರೆಮ್‌ಡಿಸಿವರ್ ಇದ್ರೆ ಮಾತ್ರಾ ಬದುಕುತ್ತೀವಿ ಅನ್ನೋದನ್ನ ಬಿಡಬೇಕು. ಇಂಜೆಕ್ಷನ್ ಕೊಡುವುದನ್ನ ವೈದ್ಯರು ನಿರ್ಧರಿಸುತ್ತಾರೆ. ತಪ್ಪು ಭಾವನೆ ಬಿಟ್ಟು, ವೈದ್ಯರ ಸಲಹೆ ಪಡೆಯಿರಿ.

(covid patents should not demand and depend on remdesivir injection to survive minister shashikanth jolle)

ಕರ್ನಾಟಕಕ್ಕೆ 1200 ಮೆಟ್ರಿಕ್ ಟನ್ ಆಕ್ಸಿಜನ್​ ಪೂರೈಸಬೇಕೆಂಬ ಹೈಕೋರ್ಟ್​ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೊರೆ ಹೋದ ಭಾರತ ಸರ್ಕಾರ