[lazy-load-videos-and-sticky-control id=”jNVn2UHNy7s”]ಬೆಂಗಳೂರು: ನಗರದಲ್ಲಿ ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ ಜಾಸ್ತಿಯಾಗುತ್ತಲ್ಲೇ ಇದೆ. ಮೃತ ಸೋಂಕಿತರ ಕುಟುಂಬದವರಿಗೂ ಹಲವಾರು ಸೋಂಕು ತಗುಲಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗದ ಪ್ರಸಂಗಗಳನ್ನೂ ನೋಡಿದ್ದೇವೆ. ಆದರೆ, ಸ್ವತಃ ತಾನೇ PPE ಕಿಟ್ ಧರಿಸಿ ತನ್ನ ಮೃತ ತಂದೆಯ ಅಂತ್ಯಕ್ರಿಯೆಯನ್ನು ಯುವತಿಯೊಬ್ಬಳು ನೆರವೇರಿಸಿರುವ ಘಟನೆ ಬೆಳಕಿಗೆ ಬಂದಿದೆ.
ಶಕ್ತಿ ಗಣಪತಿನಗರದಲ್ಲಿ ಆಟೋ ಚಾಲಕನಿಗೆ ಈ ಹಿಂದೆ ಕೊರೊನಾ ಪಾಸಿಟಿವ್ ಬಂದಿತ್ತು. ಜಯದೇವ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಚಾಲಕ ಕೊನೆಗೆ ಚಿಕಿತ್ಸೆ ಫಲಿಸದೆ ಅಸುನೀಗಿದ್ದರು. ಈ ಮಧ್ಯೆ, ಆತನ ಕುಟುಂಬದವರನ್ನ ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು.
ತಂದೆಯ ಸಾವಿನ ನೋವು ಆತನ ಇಬ್ಬರು ಹೆಣ್ಣುಮಕ್ಕಳು ಮತ್ತು ಪುಟ್ಟ ಮಗನಿಗೆ ಆಘಾತ ಉಂಟುಮಾಡಿತ್ತು. ಆದರೂ ಧೃತಿಗೆಡದ ಹಿರೇಮಗಳು ಕೂಡಲೇ ಸ್ಥಳೀಯ ನಾಯಕರ ನೆರವಿನಿಂದ ತಂದೆಯ ಅಂತ್ಯಕ್ರಿಯೆ ನೆರವೇರಿಸಿದಳು. ಆಸ್ಪತ್ರೆಯಿಂದ ಸುಮನಹಳ್ಳಿ ಚಿತಗಾರಕ್ಕೆ ಮೃತದೇಹದ ಜೊತೆ ಬಂದ ಯುವತಿ, ಕೊನೆಗೆ PPE ಕಿಟ್ ಧರಿಸಿ ಅಂತ್ಯಸಂಸ್ಕಾರ ನೆರವೇರಿಸಿದಳು.
Published On - 5:20 pm, Wed, 8 July 20