AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಂಕು ದೃಢಪಡುತ್ತಿದ್ದಂತೆ ಡಿಸ್ಚಾರ್ಜ್, ಮೃತದೇಹ ಶಿಪ್ಟ್ ಮಾಡಲು 60 ಸಾವಿರ ಡಿಮ್ಯಾಂಡ್

[lazy-load-videos-and-sticky-control id=”jstA12NMcu8″] ಹುಬ್ಬಳ್ಳಿ: ಅವಳಿ ನಗರ ಎಂದು ಕರೆಯುವ ಹುಬ್ಬಳ್ಳಿ-ಧಾರವಾಡದಲ್ಲಿ ಅಮಾನವೀಯ ಘಟನೆ ನಡೆದಿದೆ. ಹೊಟ್ಟೆ ನೋವಿನಿಂದ ದಾಖಲಾಗಿದ್ದ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢಪಡುತ್ತಿದ್ದಂತೆ ಚಿಕಿತ್ಸೆ ನೀಡುತ್ತಿದ್ದ ಖಾಸಗಿ ಆಸ್ಪತ್ರೆ ಹೊರದಬ್ಬಿದೆ. ಆಸ್ಪತ್ರೆಯವರ ಅಮಾನವೀಯತೆಗೆ ಸೋಂಕಿತ ವ್ಯಕ್ತಿ ಉಸಿರು ಚೆಲ್ಲಿದ್ದಾನೆ. ಆ ಮೃತದೇಹ ಶಿಫ್ಟ್ ಮಾಡೋದ್ರಲ್ಲೂ ಪಾಲಿಕೆ ಸಿಬ್ಬಂದಿ ದಂಧೆ ಶುರು ಮಾಡಿದೆ? ಜೂ.8ರಂದು ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಗೆ ಹೊಟ್ಟೆ ನೋವು ಎಂದು ಬಳ್ಳಾರಿ ಜಿಲ್ಲೆ ಹೊಸಪೇಟೆ ಮೂಲದ 66 ವರ್ಷದ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ರು. […]

ಸೋಂಕು ದೃಢಪಡುತ್ತಿದ್ದಂತೆ ಡಿಸ್ಚಾರ್ಜ್, ಮೃತದೇಹ ಶಿಪ್ಟ್ ಮಾಡಲು 60 ಸಾವಿರ ಡಿಮ್ಯಾಂಡ್
ಆಯೇಷಾ ಬಾನು
ಆಯೇಷಾ ಬಾನು| Edited By: |

Updated on:Jul 08, 2020 | 4:14 PM

Share

[lazy-load-videos-and-sticky-control id=”jstA12NMcu8″] ಹುಬ್ಬಳ್ಳಿ: ಅವಳಿ ನಗರ ಎಂದು ಕರೆಯುವ ಹುಬ್ಬಳ್ಳಿ-ಧಾರವಾಡದಲ್ಲಿ ಅಮಾನವೀಯ ಘಟನೆ ನಡೆದಿದೆ. ಹೊಟ್ಟೆ ನೋವಿನಿಂದ ದಾಖಲಾಗಿದ್ದ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢಪಡುತ್ತಿದ್ದಂತೆ ಚಿಕಿತ್ಸೆ ನೀಡುತ್ತಿದ್ದ ಖಾಸಗಿ ಆಸ್ಪತ್ರೆ ಹೊರದಬ್ಬಿದೆ. ಆಸ್ಪತ್ರೆಯವರ ಅಮಾನವೀಯತೆಗೆ ಸೋಂಕಿತ ವ್ಯಕ್ತಿ ಉಸಿರು ಚೆಲ್ಲಿದ್ದಾನೆ. ಆ ಮೃತದೇಹ ಶಿಫ್ಟ್ ಮಾಡೋದ್ರಲ್ಲೂ ಪಾಲಿಕೆ ಸಿಬ್ಬಂದಿ ದಂಧೆ ಶುರು ಮಾಡಿದೆ?

ಜೂ.8ರಂದು ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಗೆ ಹೊಟ್ಟೆ ನೋವು ಎಂದು ಬಳ್ಳಾರಿ ಜಿಲ್ಲೆ ಹೊಸಪೇಟೆ ಮೂಲದ 66 ವರ್ಷದ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ರು. ಜೂನ್ 17ರಂದು ವೈದ್ಯರು ಆ ವ್ಯಕ್ತಿಗೆ ಆಪರೇಷನ್ ಮಾಡಿದ್ದರು. ಆಪರೇಷನ್ ಬಳಿಕ ವ್ಯಕ್ತಿಗೆ ಕೆಮ್ಮು, ನೆಗಡಿ ಉಲ್ಬಣಗೊಂಡಿತ್ತು. ಹೀಗಾಗಿ ಕೊರೊನಾ ಪರೀಕ್ಷೆಗೆ ಗಂಟಲು ದ್ರವ ಕಳುಹಿಸಲಾಗಿತ್ತು.

ಹುಬ್ಬಳ್ಳಿಯ ಎನ್.ಎಂ ಆರ್​ ಲ್ಯಾಬ್​ನಿಂದ ಆ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಇರುವ ರಿಪೋರ್ಟ್ ಬಂದಿದೆ. ಪಾಸಿಟಿವ್ ಬರ್ತಿದ್ದಂತೆಯೇ ವ್ಯಕ್ತಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದಾರೆ. ಬಳಿಕ ಧಾರವಾಡದ ಖಾಸಗಿ ಆಸ್ಪತ್ರೆಗೆ ಸೋಂಕಿತ ದಾಖಲಾಗಿದ್ದಾನೆ. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಬೆಳಗ್ಗೆ 10:35ಕ್ಕೆ ಸೋಂಕಿತ ವ್ಯಕ್ತಿ ಕೊನೆಯುಸಿರೆಳೆದಿದ್ದಾರೆ. ವ್ಯಕ್ತಿ ಬಗ್ಗೆ ಮಾಹಿತಿ ನೀಡಿದ್ರೂ ಜಿಲ್ಲಾಡಳಿತ ನಿರ್ಲಕ್ಷ್ಯವಹಿಸುತ್ತಿದೆ.

ಮೃತದೇಹ ಶಿಫ್ಟ್ ಮಾಡೋದ್ರಲ್ಲೂ ದಂಧೆ ಇನ್ನು ಇಷ್ಟೆಲ್ಲ ಆದ ಮೇಲೆ ಈಗ ಮೃತದೇಹದ ವಿಷಯದಲ್ಲೂ ಪಾಲಿಕೆ ಸಿಬ್ಬಂದಿ ದಂಧೆ ಶುರು ಮಾಡಿದ್ದಾರೆ. ಮೃತದೇಹವನ್ನು ಕೊಂಡೊಯ್ಯಲು 60 ಸಾವಿರ ಡಿಮ್ಯಾಂಡ್ ಮಾಡಿದ್ದಾರಂತೆ. ಹು-ಧಾರವಾಡ ಪಾಲಿಕೆ ಸಿಬ್ಬಂದಿ ಬಾಕ್ಸ್​ನಲ್ಲಿ ಮೃತದೇಹ ಹೊಸಪೇಟೆಗೆ ಕೊಂಡೊಯ್ಯಲು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಅಧಿಕಾರಿಗಳನ್ನ ಸಂಪರ್ಕಿಸಿದ್ರೂ ಅವರು ಕ್ಯಾರೆ ಅಂತಿಲ್ಲ. ಹೀಗಾಗಿ ಹಣ ಹೊಂದಿಸಲು ಮೃತ ಸೋಂಕಿತನ ಮಕ್ಕಳು ಪರದಾಡಿದ್ದಾರೆ.

Published On - 12:20 pm, Wed, 8 July 20

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ