ಮೋರಿಗೆ ಬಿದ್ದು ನರಳಾಡಿದ ಹಸು: ಬಜರಂಗದಳ ಕಾರ್ಯಕರ್ತರಿಂದ ಹಸುವಿನ ರಕ್ಷಣೆ
ಮೂರು ಕಂಟೇನರ್ ವಾಹನದಲ್ಲಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ನಗರದಲ್ಲಿ ನಡೆದಿದೆ.
ತುಮಕೂರು: ನಿನ್ನೆ ರಾತ್ರಿ ಮೋರಿಗೆ ಬಿದ್ದು, ಹಸು ಹೊರ ಬರಲು ಸಾಧ್ಯವಾಗದೆ ನರಳಾಡುತ್ತಿರುವಂತಹ ಘಟನೆ ನಗರದ ಎಸ್.ಐ.ಟಿ ಬಳಿ ನಡೆದಿದೆ. ಮೋರಿಗೆ ಬಿದ್ದು ನರಳಾಡುತ್ತಿದ್ದ ಹಸುವನ್ನು ಬಜರಂಗದಳ ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ. ಜೆಸಿಬಿ ಮೂಲಕ ಚರಂಡಿಗೆ ಬಿದ್ದ ಹಸುವನ್ನು ಮೇಲಕ್ಕೆತ್ತಿದ್ದು, ಗೋವಿಗೆ ಚಿಕಿತ್ಸೆ ಕೊಡಿಸಿ, ಶ್ರೀ ಕೃಷ್ಣ ಗೋಶಾಲೆಗೆ ಹಸುವನ್ನು ರವಾನೆ ಮಾಡಲಾಗಿದೆ.
ಇದನ್ನೂ ಓದಿ: ಗದಗ ಆರೋಗ್ಯ ಇಲಾಖೆಯಲ್ಲಿ ಭಾರಿ ಹಗರಣ! ಟಿವಿ9 ಎದುರು ಗೋಳು ತೋಡಿಕೊಂಡ ಸಿಬ್ಬಂದಿ
ಅಕ್ರಮ ಗೋ ಸಾಗಾಟ ಮಾಡುತ್ತಿದ್ದವರ ಬಂಧನ
ಕಾರವಾರ: ಮೂರು ಕಂಟೇನರ್ ವಾಹನದಲ್ಲಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ನಗರದಲ್ಲಿ ನಡೆದಿದೆ. ಹೊನ್ನಾವರ ಠಾಣೆ ಪಿ.ಎಸ್.ಐ ಮಹಾಂತೇಶ್ ಹಾಗೂ ಸಿಬ್ಬಂದಿಯಿಂದ ಕಾರ್ಯಾಚರಣೆ ಮೂಲಕ 12 ಗೋವುಗಳ ರಕ್ಷಣೆ ಮಾಡಿದ್ದು, 3 ಕಂಟೈನರ್ ವಾಹನ ವಶಕ್ಕೆ ಪಡೆಯಲಾಗಿದೆ. 3 ಗೂಳಿ, 9 ಕೋಣವನ್ನು ಕಸಾಯಿ ಖಾನೆಗೆ ಸಾಗಿಸಲಾಗುತಿತ್ತು. ಚಿತ್ರದುರ್ಗ ಮೂಲದ ಮಹ್ಮದ್ ಜಾಫರ್, ಹಾವೇರಿಯ ಹನುಮಂತು ಬರ್ಮಗೌಡ, ಸುರೇಶ್ ಹನುಮಂತಪ್ಪ ಕಟ್ಟಿಗೇರಿ ಎಂಬ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.