ಉಡುಪಿ: ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮರಥೋತ್ಸವದಲ್ಲಿ ಅವಘಡ, ಪಟಾಕಿ ರಾಶಿಗೆ ಬೆಂಕಿ ಹತ್ತಿ ವೃದ್ಧ ಸೇರಿ ನಾಲ್ವರಿಗೆ ಗಾಯ
ಸಿಡಿಮದ್ದು ಪ್ರದರ್ಶನದ ವೇಳೆ ದಾಸ್ತಾನು ಇರಿಸಿದ್ದ ಪಟಾಕಿ ರಾಶಿಗೆ ಏಕಾಏಕಿ ಬೆಂಕಿ ಬಿದ್ದ ಪರಿಣಾಮ ಓರ್ವ ವೃದ್ಧ ಸಹಿತ ಮೂವರು ಬಾಲಕರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಡುಪಿ: ಕಾರ್ಕಳ ತಾಲೂಕಿನ ಧಾರ್ಮಿಕ ದತ್ತಿ ಇಲಾಖೆಗೊಳಪ್ಪಟ್ಟ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಫೆ.18ರ ಶನಿವಾರ ರಾತ್ರಿ ನಡೆದ ಬ್ರಹ್ಮರಥೋತ್ಸವದಲ್ಲಿ ಅವಘಡ ಸಂಭವಿಸಿದೆ. ಸಿಡಿಮದ್ದು ಪ್ರದರ್ಶನದ ವೇಳೆ ದಾಸ್ತಾನು ಇರಿಸಿದ್ದ ಪಟಾಕಿ ರಾಶಿಗೆ ಏಕಾಏಕಿ ಬೆಂಕಿ ಬಿದ್ದ ಪರಿಣಾಮ ಓರ್ವ ವೃದ್ಧ ಸಹಿತ ಮೂವರು ಬಾಲಕರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ವೇಳೆ ಗಾಯಗೊಂಡ ಬಾಲಕರು ಸುಮಾರು ಅರ್ಧ ತಾಸಿಗಿಂತಲೂ ಹೆಚ್ಚು ಹೊತ್ತು ಅಲ್ಲೇ ಇದ್ದರೂ ದೇವಸ್ಥಾನದ ಆಡಳಿತ ಮಂಡಳಿಯವರು ಅವರನ್ನು ಆಸ್ಪತ್ರೆಗೆ ಸಾಗಿಸಲು ಯಾವುದೇ ವಾಹನದ ವ್ಯವಸ್ಥೆ ಮಾಡದೇ, ಕೊನೆಗೆ ಗಾಯಾಳು ಬಾಲಕರ ಮನೆ ಮಂದಿಯೇ ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಸಾಗಿಸಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅಲ್ಲದೇ ಬೃಹತ್ ಜನಸಂಖ್ಯೆ ಸೇರುವ ಜಾತ್ರಾ ಸಮಯದಲ್ಲಿ ಯಾವುದೇ ಪ್ರಥಮ ಚಿಕಿತ್ಸಾ ಕೊಠಡಿ ಅಥವಾ ಅಂಬುಲೆನ್ಸ್ ವ್ಯವಸ್ಥೆ ಕೂಡ ಮಾಡದಿರುವುದು ಆಡಳಿತ ಮಂಡಳಿಯ ಬೇಜವಾಬ್ದಾರಿಯೇ ಕಾರಣವಾಗಿದೆ.
ಸಿಡಿಮದ್ದು ಪ್ರದರ್ಶಿಸುವ ಸ್ಥಳದಲ್ಲೇ ಪೇಟೆಯ ಮಧ್ಯಭಾಗದಲ್ಲಿ ದುರ್ನಾತ ಬೀರುವ ಬೃಹತ್ ಹೊಂಡವೊಂದಿದ್ದು ಅದಕ್ಕೆ ಹಳೇ ತಗಡು ಶೀಟುಗಳನ್ನು ಮುಚ್ಚಲಾಗಿದ್ದು, ಬೃಹತ್ ಪಟಾಕಿ ಸಿಡಿಯುವ ವೇಳೆ ಓಡುವ ಭರದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಹಲವರು ಈ ಹೊಂಡಕ್ಕೆ ಬಿದ್ದು ಸಣ್ಣ ಪುಟ್ಟ ಗಾಯಗೊಂಡಿದ್ದಾರೆ. ಹಲವು ವರ್ಷಗಳಿಂದ ಅಪಾಯದ ಕರೆಗಂಟೆ ಭಾರಿಸುತ್ತಿರುವ ಈ ಹೊಂಡವಿದ್ದರೂ ಸ್ಥಳೀಯ ಆಡಳಿತವಾಗಲಿ, ದೇವಸ್ಥಾನದ ಆಡಳಿತ ಮಂಡಳಿಯಾಗಲಿ ನಿರ್ಲಕ್ಷ್ಯ ತೋರಿರುವುದು ವಿಪರ್ಯಾಸವೇ ಸರಿ. ಈ ಬಗ್ಗೆ ಸ್ಥಳೀಯರು ಗ್ರಾಮ ಪಂಚಾಯತ್‌ಗೆ ಹಲವಾರು ಬಾರಿ ತಿಳಿಸಿದರೂ, ಜನಪ್ರತಿನಿಧಿಗಳು ಗಮನಹರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಸೇಡಿನ ರಾಜಕಾರಣ ಮಾಡುತ್ತಿಲ್ಲ: ಛತ್ತೀಸ್‌ಗಢ ಇಡಿ ದಾಳಿ ಕುರಿತು ನಿರ್ಮಲಾ ಸೀತಾರಾಮನ್
ತುಮಕೂರು: ಜಿಲ್ಲೆಯ ಕೊರಟಗೆರೆ ಪಟ್ಟಣದ ಬೈಪಾಸ್ ಬಳಿ ಗಾರ್ಮೆಂಟ್ಸ್ ಬಸ್ ಹಾಗೂ ಟಿಪ್ಪರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಕೂದಲೆಳೆ ಅಂತರದಲ್ಲಿ ಭಾರೀ ದುರಂತ ತಪ್ಪಿದೆ. ಘಟನೆಯಲ್ಲಿ 10 ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಾಜಿ ಶಾಸಕ ಸುಧಾಕರ ಲಾಲ್ ಗಾಯಾಳುಗಳ ನೆರವಿಗೆ ಧಾವಿಸಿ ಮಾನವೀಯತೆ ಮೇರೆದಿದ್ದಾರೆ. ಕೊರಟಗೆರೆ ಕ್ಷೇತ್ರದ ಮಾಜಿ ಶಾಸಕರ ಕಾರಿನಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ತುಮಕೂರಿನಿಂದ ಕೆಲಸ ಮುಗಿಸಿ ಮಹಿಳಾ ಕಾರ್ಮಿಕರು ಬಸ್ ನಲ್ಲಿ ತೆರಳುತ್ತಿದ್ದ ವೇಳೆ ಕೊರಟಗೆರೆ ಪಟ್ಟಣದ ಬೈ ಪಾಸ್ ಬಳಿ ಗಾರ್ಮೆಂಟ್ಸ್ ಬಸ್ ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಸದ್ಯ ಮಾಜಿ ಶಾಸಕ ಸುಧಾಕರ ಲಾಲ್ ಆಘಾತಗೊಂಡವರ ಸಹಾಯಕ್ಕೆ ಧಾವಿಸಿ ಮಹಿಳಾ ಕಾರ್ಮಿಕರಿಗೆ ಧೈರ್ಯ ತುಂಬಿದ್ದಾರೆ. ತಮ್ಮ ಮನೆಗಳಿಗೆ ತೆರಳಲು ಪ್ರತ್ಯೇಕ ವಾಹನ ಕಲ್ಪಿಸಿಕೊಟ್ಟು ಮಾನವೀಯತೆ ಮೇರೆದಿದ್ದಾರೆ. ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ