ಅದ್ದೂರಿಯಾಗಿ ನಡೆದ ಕ್ರೇಜಿಸ್ಟಾರ್ ಬರ್ತ್ಡೇ; ಇಲ್ಲಿದೆ ವಿಡಿಯೋ
ರಾಜಾಜಿನಗರದ ರಾಜ್ಕುಮಾರ್ ರಸ್ತೆಯ ಅವರ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ಬಗೆ ಬಗೆಯ ಕೇಕ್ ಹಾಗೂ ಹಾರ ತಂದು ಅವರಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
ನಟ ರವಿಚಂದ್ರನ್ (Ravichandran) ಅವರಿಗೆ ಇಂದು (ಮೇ 30) ಬರ್ತ್ಡೇ ಸಂಭ್ರಮ. ಅವರಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳಿಂದ ಶುಭಾಯಗಳು ಬರುತ್ತಿವೆ. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ಸುಮಾರು ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ಅವರು ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಾಜಿನಗರದ ರಾಜ್ಕುಮಾರ್ ರಸ್ತೆಯ ಅವರ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ಬಗೆ ಬಗೆಯ ಕೇಕ್ ಹಾಗೂ ಹಾರ ತಂದು ಅವರಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಅವರಿಗೆ ತಂದ ಕೇಕ್ ಎಲ್ಲರ ಗಮನ ಸೆಳೆಯುತ್ತಿದೆ. ರವಿಚಂದ್ರನ್ ಅವರು ಇತ್ತೀಚೆಗೆ ನಟಿಸಿದ ಯಾವ ಸಿನಿಮಾ ಕೂಡ ಅಷ್ಟು ದೊಡ್ಡ ಯಶಸ್ಸು ಪಡೆಯಲಿಲ್ಲ. ಆದರೆ, ಇತ್ತೀಚೆಗೆ ತೆರೆಗೆ ಬಂದ ‘ದೃಶ್ಯ 2’ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿತು. ಇದು ಅವರಿಗೆ ಖುಷಿ ನೀಡಿದೆ. ಅವರ ಅಭಿಮಾನಿಗಳೂ ಈ ವಿಚಾರದಲ್ಲಿ ಸಂಭ್ರಮಿಸುತ್ತಿದ್ದಾರೆ. ಹೀಗಾಗಿ, ಅವರಿಗೆ ಈ ವರ್ಷದ ಬರ್ತ್ಡೇ ವಿಶೇಷವಾಗಿದೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ