ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್ನಲ್ಲಿ 20 ರನ್ ಬಾರಿಸಿದ ವಿಡಿಯೋ ಇಲ್ಲಿದೆ
ಕ್ರಿಕೆಟ್ ಆಡಲು ಹೋದ ಯುವಕ 4 ಎಸೆತಗಳಲ್ಲಿ ಬರೋಬ್ಬರಿ 20 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾನೆ. ಬಳಿಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಫೆ.24ರಂದು ಬೀಚನಹಳ್ಳಿಯಲ್ಲಿ ಕ್ರಿಕೆಟ್ ಟೂರ್ನಮೆಂಟ್ ನಡೆದಿದ್ದು, ನೇರಳೆ ಪ್ರೀಮಿಯರ್ ಲೀಗ್ ಹೆಸರಿನಲ್ಲಿ ಆಯೋಜನೆ ಮಾಡಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜೆಪಿ ವಾರಿಯರ್ಸ್ ತಂಡದ ಪರವಾಗಿ ಆಡಿದ್ದ ದಿವ್ಯಾ ಕುಮಾರ್, ಡೆವಿಲ್ಸ್ ಸೂಪರ್ ಕಿಂಗ್ ತಂಡದ ವಿರುದ್ಧ 4 ಬಾಲ್ಗಳಲ್ಲಿ 20 ರನ್ ಚಚ್ಚಿ ತಂಡವನ್ನು ಗೆಲ್ಲಿಸಿದ್ದ.
ಮೈಸೂರು, (ಮಾರ್ಚ್ 15): ಕ್ರಿಕೆಟ್ ಆಡಲು ಹೋದ ಯುವಕ 4 ಎಸೆತಗಳಲ್ಲಿ ಬರೋಬ್ಬರಿ 20 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾನೆ. ಬಳಿಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಫೆ.24ರಂದು ಬೀಚನಹಳ್ಳಿಯಲ್ಲಿ ಕ್ರಿಕೆಟ್ ಟೂರ್ನಮೆಂಟ್ ನಡೆದಿದ್ದು, ನೇರಳೆ ಪ್ರೀಮಿಯರ್ ಲೀಗ್ ಹೆಸರಿನಲ್ಲಿ ಆಯೋಜನೆ ಮಾಡಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜೆಪಿ ವಾರಿಯರ್ಸ್ ತಂಡದ ಪರವಾಗಿ ಆಡಿದ್ದ ದಿವ್ಯಾ ಕುಮಾರ್, ಡೆವಿಲ್ಸ್ ಸೂಪರ್ ಕಿಂಗ್ ತಂಡದ ವಿರುದ್ಧ 4 ಬಾಲ್ಗಳಲ್ಲಿ 20 ರನ್ ಚಚ್ಚಿ ತಂಡವನ್ನು ಗೆಲ್ಲಿಸಿದ್ದ. ಬಳಿಕ ಮನೆಗೆ ಹೊರಟವನು ಹೆಚ್.ಡಿ.ಕೋಟೆ ತಾಲೂಕಿನ ವಡ್ಡರಗುಡಿ ಗ್ರಾಮದ ರಸ್ತೆ ಬಳಿ ಕೋಮಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, 20 ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾದೇ ಕೊನೆಯುಸಿರೆಳೆದಿದ್ದಾನೆ. ಕ್ರಿಕೆಟ್ನಲ್ಲಿ ಗೆದ್ದಿದ್ದಕ್ಕೆ ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಇನ್ನು ದಿವ್ಯಾ ಕುಮಾರ್ ಬ್ಯಾಟಿಂಗ್ ವೈಖರಿಯನ್ನು ವಿಡಿಯೋನಲ್ಲಿ ನೋಡಬಹುದು.