ಬಾಗಲಕೋಟೆಯಲ್ಲಿ ಎಂದಿನ ಮೋಜಿನೊಂದಿಗೆ ಹೋಳಿ ಹಬ್ಬದಾಚರಣೆ, ಡಿಜೆ ಅಬ್ಬರಕ್ಕೆ ಕುಣಿದ ಯುವತಿಯರು!
ಡಿಜೆ ಮ್ಯೂಸಿಕ್ಗೆ ಕೇವಲ ಯುವತಿಯರು ಮಾತ್ರ ಕುಣಿಯುತ್ತಿದ್ದಾರೆ ಎಂದು ನೀವು ಭಾವಿಸಿದ್ದರೆ ನಿಮ್ಮ ಎಣಿಕೆ ತಪ್ಪು ಮಾರಾಯ್ರೇ. ಯಾಕೆಂದರೆ ಕುಣಿಯುವವರಲ್ಲಿ ಗೃಹಿಣಿಯರು ಮತ್ತು ಅಮ್ಮಂದಿರು ಸಹ ಇದ್ದಾರೆ. ಕೆಲ ಮಹಿಳೆಯರು ತಮ್ಮ ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಕುಣಿದರೆ ಕೆಲವರು ಮಕ್ಕಳ ಕೈ ಹಿಡಿದು ಕುಣಿಯುತ್ತಿದ್ದಾರೆ. ಮತ್ತೊಂದು ಭಾಗದಲ್ಲಿ ರಂಗುಗಳಲ್ಲಿ ಮಿಂದೆದ್ದಿರುವ ಯುವಕರು ಕುಣಿಯುತ್ತಿರುವ ಮಹಿಳೆಯರನ್ನು ಹುರಿದುಂಬಿಸುತ್ತಿದ್ದಾರೆ.
ಬಾಗಲಕೋಟೆ, ಮಾರ್ಚ್ 15: ಬಾಗಲಕೋಟೆಯಲ್ಲಿ ಪ್ರತಿವರ್ಷ ಹೋಳಿಹಬ್ಬವನ್ನು (festival of colours) ಬಹು ವಿಜೃಂಭಣೆಯಿಂದ ಅಚರಿಸಲಾಗುತ್ತದೆ, ಮ್ಯೂಸಿಕ್, ಮಸ್ತಿ ಜೊತೆ ಕುಣಿತ ಹೋಳಿಯಂದು ಅವ್ಯಾಹತವಾಗಿ ನಡೆಯುತ್ತವೆ. ಗಮನಿಸಬೇಕಾದ ಸಂಗತಿಯೆಂದರೆ ಬಾಗಲಕೋಟೆಯಲ್ಲಿ ಜನ ಅದರಲ್ಲೂ ವಿಶೇಷವಾಗಿ ಯುವತಿಯರಿಗಾಗಿ ಬಣ್ಣ ಆಡಲು ಪ್ರತ್ಯೇಕ ಜಾಗದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ ಮತ್ತು ಇಲ್ಲಿ ಕರೋಕೆ ಡಿಜೆ ಸೌಂಡ್ ಏರ್ಪಾಟು ಇರುತ್ತದೆ. ಯುವತಿಯರು ಬಣ್ಣ ಎರಚುತ್ತಾ ನಿರ್ಭಿಡೆಯಿಂದ ಡ್ಯಾನ್ಸ್ ಮಾಡುವುದನ್ನು ದೃಶ್ಯಗಳಲ್ಲಿ ನೋಡಬಹುದು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Holi 2025: ಪತಂಜಲಿ ವಿಶ್ವವಿದ್ಯಾಲಯದಲ್ಲಿ ಬಾಬಾ ರಾಮ್ದೇವ್ ಅವರಿಂದ ವಿಭಿನ್ನ ಹೋಳಿ ಆಚರಣೆ