ರಾಹುಲ್ ಗಾಂಧಿ ಬಗ್ಗೆ ಮಾತಾಡುತ್ತಿದ್ದ ಸಿಟಿ ರವಿ ಮಹಿಳೆಯೊಬ್ಬರು ಮಧ್ಯಪ್ರವೇಶಿಸಿದಾಗ ನಿರುತ್ತರರಾದರು!

ಅರುಣ್​ ಕುಮಾರ್​ ಬೆಳ್ಳಿ

Updated on: Aug 11, 2025 | 6:42 PM

ಸಿಟಿ ರವಿ ಅವರಿಗೆ ಹಾಗೆ ಮಾತಾಡುವ ಅವಶ್ಯಕತೆ ಇರಲಿಲ್ಲ. ಮಹಿಳೆ ಕೇಳಿದ ಪ್ರಶ್ನೆಗೆ ಸಮಾಧಾನಚಿತ್ತದಿಂದ ಉತ್ತರಿಸಿದರೂ ನಡೆಯುತಿತ್ತು. ಆದರೆ ಅವರು ಹಾಗೆ ಮಾಡದೆ ಅನಪೇಕ್ಷಣೀಯ ಮಾತನ್ನಾಡುತ್ತಾರೆ, ‘ನಿಮಗೆಲ್ಲೋ ಹುಚ್ಚು’ ಅಂತ ಹೇಳಿದರೆ ಯಾವ ಮಹಿಳೆ ತಾನೇ ಸಹಿಸಿಕೊಂಡಾಳು? ರವಿ ಮಾತಿನಿಂದ ಧೃತಿಗೆಡದ ಮಹಿಳೆ ಬಿಜೆಪಿ ನಾಯಕ ಹೋದ ಕಡೆಯೇ ಹೋಗುತ್ತಾರೆ!

ಬೆಂಗಳೂರು, ಆಗಸ್ಟ್ 11: ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಇಂದು ವಿಧಾನಸಭಾ ಲಾಂಜ್​ನಲ್ಲಿ ಮಾಧ್ಯಮಗಳ ಜೊತೆ ಮಾತಾಡುತ್ತಾ ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡುತ್ತಿದ್ದಾಗ ಅಲ್ಲಿದ್ದ ಮಹಿಳೆಯೊಬ್ಬರು ವಾದಕ್ಕಿಳಿಯುತ್ತಾರೆ (woman’s argument). ಅದು ಹೇಗೆ ನೀವು ರಾಹುಲ್ ಗಾಂಧಿ ತಪ್ಪು ನೀವು ಸರಿ ಅಂತ ಹೇಳುತ್ತೀರಿ? ನಿಮಗೆ ಹಾಗೆ ಹೇಳಲು ಪ್ರೇರೇಪಣೆ ನೀಡುವ ಅಂಶವಾದರೂ ಯಾವುದು ಅಂತ ಕೇಳುತ್ತಾರೆ. ಮಹಿಳೆಯ ಅನಿರೀಕ್ಷಿತ ದಾಳಿಯಿಂದ ತಬ್ಬಿಬ್ಬಾಗುವ ರವಿ ಸಾವರಿಸಿಕೊಳ್ಳಲು ಕೊಂಚ ಸಮಯ ತೆಗೆದುಕೊಳ್ಳುತ್ತಾರೆ. ಮಹಿಳೆ ಇಂಗ್ಲೀಷ್ ನಲ್ಲಿ ಮಾತಾಡುತ್ತಾರೆ, ರವಿಗೆ ಭಾಷೆ ಬರಲ್ಲ ಅಂತೇನೂ ಇಲ್ಲ. ಆದರೆ ಕೊನೆಗೆ ಏನನ್ನೂ ಹೇಳಲಾಗದೆ, ‘ಪಾಗಲ್ ಹೋ’ ಅಂದುಬಿಟ್ಟು ಅಲ್ಲಿಂದ ಹೊರಡುತ್ತಾರೆ. ಅವರ ಮಾತಿನಿಂದ ಕೆರಳುವ ಮಹಿಳೆ, ‘ತುಮ್ ಲೋಗ್ ಪಾಗಲ್ ಹೋ’ ಅನ್ನುತ್ತಾರೆ!

ಇದನ್ನೂ ಓದಿ:  ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅರೋಪ ಮಾಡುತ್ತಿರುವ ರಾಹುಲ್ ಗಾಂಧಿಗೆ ಚಿಕಿತ್ಸೆಯ ಅಗತ್ಯವಿದೆ: ಸಿಟಿ ರವಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.