ಮಾದಕ ವ್ಯಸನಿ ಸಿಟಿ ರವಿ ಹೆಂಡ ಕುಡಿದೇ ಸದನಕ್ಕೆ ಬರುತ್ತಾರೆ: ಬಿಕೆ ಹರಿಪ್ರಸಾದ್, ಕಾಂಗ್ರೆಸ್ ನಾಯಕ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 22, 2022 | 1:39 PM

ಕುಡುಕರಿಗೆ, ಕೊಲೆಗಡುಕರಿಗೆ ಕೆಲವು ಸಲ ಕ್ಷಮಾಪಣೆ ಸಿಗುತ್ತದೆ ಮತ್ತು ಅವರೊಬ್ಬ ಮಾದಕ ವ್ಯಸನಿ ಅನ್ನೋ ಕಾರಣಕ್ಕೆ ನಾವು ಸಹಿಸಿಕೊಳ್ಳಬೇಕಾಗುತ್ತದೆ ಎಂದು ಹರಿಪ್ರಸಾದ್ ಮಾರ್ಮಿಕವಾಗಿ ಹೇಳಿದರು.

ಬೆಳಗಾವಿ: ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಬಿಕೆ ಹರಿಪ್ರಸಾದ್ (BK Hari Prasad) ಅವರು ಸಾಮಾನ್ಯವಾಗಿ ಸೌಮ್ಯಧಾಟಿಯಲ್ಲಿ ಮಾತಾಡುತ್ತಾರೆ. ಆದರೆ ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಸಿಟಿ ರವಿ (CT Ravi) ಬಗ್ಗೆ ಮಾತಾಡುವಾಗ ಅವರು ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಿದರು. ರವಿ ಸದನಕ್ಕೆ ಬರುವಾಗ ಹೆಂಡ ಕುಡಿದೇ ಬರುತ್ತಾರೆ ಮತ್ತು ಸದನದಲ್ಲಿ ಮಾತಾಡುವಾಗ ಹೆಚ್ಚುವರಿ ಪಂಚ್ ಗಾಗಿ ಗಾಂಜಾ (Gaanja) ಸೇವಿಸುತ್ತಾರೆ ಎಂದು ಅವರು ತೀವ್ರ ಸ್ವರೂಪದ ಆರೋಪ ಮಾಡಿದರು. ಕುಡುಕರಿಗೆ, ಕೊಲೆಗಡುಕರಿಗೆ ಕೆಲವು ಸಲ ಕ್ಷಮಾಪಣೆ ಸಿಗುತ್ತದೆ ಮತ್ತು ಅವರೊಬ್ಬ ಮಾದಕ ವ್ಯಸನಿ ಅನ್ನೋ ಕಾರಣಕ್ಕೆ ನಾವು ಸಹಿಸಿಕೊಳ್ಳಬೇಕಾಗುತ್ತದೆ ಎಂದು ಹರಿಪ್ರಸಾದ್ ಮಾರ್ಮಿಕವಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Dec 22, 2022 01:03 PM