Loading video

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿಗೆ ರೌಡಿಶೀಟರ್ ಆಯ್ಕೆಯಾಗಿದ್ದನ್ನು ಸಿಟಿ ರವಿ ವಿರೋಧಿಸಲಿಲ್ಲ!

Updated on: May 14, 2025 | 4:36 PM

ಹರೀಶ್ ಇಂಜಾಡಿಯನ್ನು ನೇಮಕ ಮಾಡಿದ್ದಕ್ಕೆ ತನ್ನದೇನೂ ಅಭ್ಯಂತರವಿಲ್ಲ ಎನ್ನುವಂತಿದೆ ರವಿಯವರ ಮಾತಿನ ಧಾಟಿ. ಅವನೊಂದು ವೇಳೆ ರೌಡಿಶೀಟರ್ ಆಗಿದ್ದರೆ ಜನ ಛೀಮಾರಿ ಹಾಕುತ್ತಾರೆ ಎನ್ನುವ ರವಿಗೆ ಕುಕ್ಕೆ ಗ್ರಾಮಸ್ಥರು ಹರೀಶ್ ಆಯ್ಕೆಗೆ ತೀವ್ರ ಸ್ವರೂಪದ ವಿರೋಧ ವ್ಯಕ್ತಪಡಿಸಿರುವುದು ಗೊತ್ತಿಲ್ಲವೇ? ಮೇಲಾಗಿ ಹರೀಶ್ ಕಾಂಗ್ರೆಸ್ ಪಕ್ಷದವರು ಮತ್ತು ಅವರ ಆಯ್ಕೆಗೆ ಶಿಫಾರಸ್ಸು ಮಾಡಿದ್ದು ಸಚಿವ ದಿನೇಶ್ ಗುಂಡೂರಾವ್.

ಬೆಂಗಳೂರು, ಮೇ 14: ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷನಾಗಿ ಮಾಜಿ ರೌಡಿಶೀಟರ್ ಹರೀಶ್ ಇಂಜಾಡಿ (rowdy sheeter) ನೇಮಕಗೊಂಡಿರುವ ಬಗ್ಗೆ ಬಿಜೆಪಿ ನಾಯಕ ಸಿಟಿ ರವಿ ನೀಡಿದ ಪ್ರತಿಕ್ರಿಯೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತಿದೆ. ರೌಡಿಶೀಟರ್ ಅಂದ ಮಾತ್ರಕ್ಕೆ ಎಲ್ಲರು ರೌಡಿಗಳಾಗಿರುತ್ತಾರೆ ಅಂತ ಭಾವಿಸಬಾರದು, ಕೆಲವರು ರೌಡಿ ಅಲ್ಲದಿದ್ದರೂ ಅವರ ವಿರುದ್ಧ ರೌಡಿಶೀಟರ್ ಹಾಕಿರಲಾಗಿರುತ್ತೆ, ಕೆಲವರು ರೌಡಿಗಳಾಗಿದ್ದರೂ ಅವರ ವಿರುದ್ಧ ರೌಡಿಶೀಟರ್ ಇರೋದಿಲ್ಲ, ತನ್ನ ವಿರುದ್ಧವೂ ರೌಡಿಶೀಟರ್ ಅಂತ ದಾಖಲಿಸಲಾಗಿದೆ, ಆದರೆ ತಾನು ರೌಡಿಯಲ್ಲ, ಪಕ್ಷದ ಸಿದ್ಧಾಂತಗಳನ್ನು ಅನುಸರಿಸುವ ಕಾರಣಕ್ಕೆ ರೌಡಿಶೀಟರ್ ಹಾಕಲಾಗಿದೆ, ಯಾರ ವಿರುದ್ಧವೂ ವಿನಾಕಾರಣ ಕೈ ಮಾಡಿದವನಲ್ಲ ಎಂದು ಹೇಳುತ್ತಾರೆ.

ಇದನ್ನೂ ಓದಿ:  ಸಿಎಂಗೆ ಕಪ್ಪು ಬಟ್ಟೆ ತೋರಿಸಿದವರು ಅರೆಸ್ಟ್​: ಸಿಟಿ ರವಿ ರೀತಿ ಠಾಣೆಯಿಂದ ಠಾಣೆಗೆ ಅಲೆದಾಡಿಸುತ್ತಿರುವ ಪೊಲೀಸ್ರು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ