ಪೊಲೀಸರ ಸಮ್ಮುಖದಲ್ಲೇ ಕಾಂಗ್ರೆಸ್ ಕಾರ್ಯಕರ್ತರನ್ನು ಕಲ್ಲಿಂದ ಹೊಡೆಯಲು ಮುಂದಾದ ಸಿಟಿ ರವಿ ಬೆಂಬಲಿಗ!

ಪೊಲೀಸರ ಸಮ್ಮುಖದಲ್ಲೇ ಕಾಂಗ್ರೆಸ್ ಕಾರ್ಯಕರ್ತರನ್ನು ಕಲ್ಲಿಂದ ಹೊಡೆಯಲು ಮುಂದಾದ ಸಿಟಿ ರವಿ ಬೆಂಬಲಿಗ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 03, 2022 | 2:11 PM

ಲೂಟಿ ಕೋರ ಸಿಟಿ ರವಿಗೆ ಧಿಕ್ಕಾರ ಎಂದು ಅವರು ಕೂಗುತ್ತಿದ್ದಾಗ, ಬಿಜೆಪಿ ಧುರೀಣನ ಬೆಂಬಲಿಗನೊಬ್ಬ ಪೊಲೀಸರ ಸಮ್ಮುಖದಲ್ಲೇ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಲು ಮುಂದಾಗುತ್ತಾನೆ.

ಚಿಕ್ಕಮಗಳೂರು:  ಬಿಜೆಪಿ ನಾಯಕ ಸಿಟಿ ರವಿ (CT Ravi) ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಿದ್ದರಾಮಯ್ಯನವರಿಗೆ (Siddaramaiah) ಸಿದ್ರಾಮುಲ್ಲಾಖಾನ್ ಅಂತ ಉಲ್ಲೇಖಿಸಿದ್ದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಕೋಪ ಹುಟ್ಟಿಸಿದೆ. ಶನಿವಾರ ಕಾರ್ಯಕರ್ತರು ಚಿಕ್ಕಮಗಳೂರಿನಲ್ಲಿರುವ (Chikmagalur) ರವಿಯವರ ಮನೆಮುಂದೆ ಪ್ರದರ್ಶನ ನಡೆಸಿದರು. ಲೂಟಿ ಕೋರ ಸಿಟಿ ರವಿಗೆ ಧಿಕ್ಕಾರ ಎಂದು ಅವರು ಕೂಗುತ್ತಿದ್ದಾಗ, ಬಿಜೆಪಿ ಧುರೀಣನ ಬೆಂಬಲಿಗನೊಬ್ಬ ಪೊಲೀಸರ ಸಮ್ಮುಖದಲ್ಲೇ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಲು ಮುಂದಾಗುತ್ತಾನೆ. ವಿಡಿಯೋದಲ್ಲಿ ಸೆರೆಯಾಗಿರುವ ದೃಶ್ಯ ನೋಡುತ್ತಿದ್ದರೆ ಬಿಜೆಪಿ ನಾಯಕರಿಗೆ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಅವಶ್ಯಕತೆಯಿಲ್ಲ ಅನಿಸುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ