ಮನೆ ಮುಂದೆ ಕಟ್ಟಿದ್ದ ನಾಯಿಯ ಮೇಲೆ ಚಿರತೆ ಆಕ್ರಮಣ, ನಾಯಿ ಬೊಗಳತೊಡಗಿದಾಗ ಪಲಾಯನ
ನಾಯಿಯ ಬೊಗಳುವಿಕೆಯಿಂದ ಗಾಬರಿಗೊಳ್ಳುವ ಚಿರತೆ ಅಲ್ಲಿಂದ ಪರಾರಿಯಾಗುತ್ತದೆ. ಈ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿ ನವಿಲುಗೋಣದಲ್ಲಿ ಬೋನು ಇಟ್ಟಿದ್ದಾರೆ.
ಕಾರವಾರ: ಚಿರತೆಗಳು (leopards) ಜನವಸತಿ ಪ್ರದೇಶ ಪ್ರವೇಶಿಸುತ್ತಿರುವುದು ದಿನೇದಿನೆ ಹೆಚ್ಚುತ್ತಿದೆ ಮಾರಾಯ್ರೇ. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ (Honnavar) ತಾಲ್ಲೂಕಿನ ಗಾಳಿಬೈಲ್ ಹೆಸರಿನ ಗ್ರಾಮದಲ್ಲಿ ಶನಿವಾರ ಬೆಳಗಿನ ಜಾವ ಚಿರತೆಯೊಂದು ಮನೆ ಮುಂದೆ ಕಟ್ಟಿಹಾಕಿದ್ದ ನಾಯಿಯನ್ನು ಎತ್ತಿಕೊಂಡು ಹೋಗಲು ವಿಫಲ ಪ್ರಯತ್ನ ನಡೆಸಿದ್ದು ಮನೆಮುಂದಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಾಯಶಃ ನಾಯಿಯನ್ನು ಕಟ್ಟಿದ್ದರಿಂದ ಚಿರತೆಗೆ ಅದನ್ನೆತ್ತಲು ಸಾಧ್ಯವಾಗಿಲ್ಲ. ಅಲ್ಲದೆ ನಾಯಿಯ ಬೊಗಳುವಿಕೆಯಿಂದ (barking) ಗಾಬರಿಗೊಳ್ಳುವ ಚಿರತೆ ಅಲ್ಲಿಂದ ಪರಾರಿಯಾಗುತ್ತದೆ. ಈ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿ ನವಿಲುಗೋಣದಲ್ಲಿ ಬೋನು ಇಟ್ಟಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos