ಬೆಳಗಾವಿಯ ಕಿತ್ತೂರಿನಲ್ಲಿ ಪಟಾಕಿ ಸಿಡಿತದಿಂದ ಕುಶನ್ ಮತ್ತು ಫರ್ನಿಚರ್ ಅಂಗಡಿಗೆ ಬೆಂಕಿ, ರೂ. 3 ಲಕ್ಷ ಮೌಲ್ಯದ ವಸ್ತುಗಳು ಭಸ್ಮ!
ಸುಮಾರು ಮೂರು ಲಕ್ಷ ಮೌಲ್ಯದ ಕುಶನ್ ಮತ್ತು ಪೀಠೋಪಕರಣಗಳು ಬೆಂಕಿಗಾಹುತಿಯಾಗಿವೆ ಎಂದು ಹೇಳಲಾಗುತ್ತಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.
ಬೆಳಗಾವಿ: ದೀಪಾವಳಿ ಹಬ್ಬ ಆಚರಿಸುವಾಗ ಪಟಾಕಿ ಸಿಡಿಸುವ ಆಯಾಮಕ್ಕೆ ಸಂಬಂಧಿಸಿದಂತೆ ಕಟ್ಟೆಚ್ಚರವಹಿಸಬೇಕೆಂದು ನಾವು ಎಚ್ಚರಿಸುತ್ತಲೇ ಇದ್ದೇವೆ. ಇಲ್ನೋಡಿ ಬೆಳಗಾವಿಯ ಕಿತ್ತೂರು (Kittur) ಪಟ್ಟಣದಲ್ಲಿ ಕಳೆದ ರಾತ್ರಿ ರಸ್ತೆ ಪಕ್ಕ ಪಟಾಕಿ ಸಿಡಿಸುತ್ತಿದ್ದಾಗ, ಪ್ರಾಯಶಃ ರಾಕೆಟ್ ಇರಬಹುದು ಅನಿಸುತ್ತದೆ, ಹಾರಿ ಶಬ್ಬೀರ್ ಬೀಡಿ (Shabbir Beedi) ಎನ್ನುವವರಿಗೆ ಸೇರಿದ ಪೀಠೋಪರಕರಣ (furniture) ಮತ್ತು ಹತ್ತಿ ಹಾಗೂ ಸೆಣಬಿನಿಂದ ತಯಾರಿಸುವ ಕುಶನ್ ಅಂಗಡಿಯೊಳಗೆ ನುಗ್ಗಿದ್ದರಿಂದ ಪೂರ್ತಿ ಅಂಗಡಿಗೆ ಬೆಂಕಿ ಹೊತ್ತಿಕೊಂಡಿದೆ. ಸುಮಾರು ಮೂರು ಲಕ್ಷ ಮೌಲ್ಯದ ಕುಶನ್ ಮತ್ತು ಪೀಠೋಪಕರಣಗಳು ಬೆಂಕಿಗಾಹುತಿಯಾಗಿವೆ ಎಂದು ಹೇಳಲಾಗುತ್ತಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.
Latest Videos