ಚಿತ್ರದುರ್ಗದಲ್ಲಿ ರಸ್ತೆ ವಿಭಜಕಕ್ಕೆ ಗುದ್ದಿದ ಕಾರು, ಸ್ಥಳದಲ್ಲೇ ಮೂರು ಸಾವು, ಇಬ್ಬರಿಗೆ ಗಂಭೀರ ಗಾಯ!
ಮೃತರನ್ನು ಮೇದೆಹಳ್ಳಿ ಗ್ರಾಮದ ಹರೀಶ್ ಮತ್ತು ಸಚಿನ್ ಹಾಗೂ ಕಾಮಸಮುದ್ರ ನಿವಾಸಿ ಮನು ಎಂದು ಗುರುತಿಸಲಾಗಿದೆ.
ಚಿತ್ರದುರ್ಗ: ದೀಪಾವಳಿ ಹಬ್ಬ ಸಂಭ್ರಮಾಚರಣೆ ಸಂದರ್ಭದಲ್ಲಿ ಇದು ನಡೆಯಬಾರದಿತ್ತು. ಮಂಗಳವಾರ ಬೆಳಗಿನ ಜಾವ ಕಾರೊಂದು ಚಿತ್ರದುರ್ಗ ನಗರದ ಪ್ರವಾಸಿ ಮಂದಿರ (inspection bungalow) ಬಳಿ ರಸ್ತೆ ವಿಭಜಕಕ್ಕೆ (divider) ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸತ್ತಿದ್ದಾರೆ ಮತ್ತು ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಮೇದೆಹಳ್ಳಿ ಗ್ರಾಮದ ಹರೀಶ್ ಮತ್ತು ಸಚಿನ್ ಹಾಗೂ ಕಾಮಸಮುದ್ರ ನಿವಾಸಿ ಮನು ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ (district hospital) ದಾಖಲಿಸಲಾಗಿದೆ.
Latest Videos