Bengaluru News: ಸಿಂಗಪೂರ್ನಿಂದ ಕೆಐಎ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಇಬ್ಬರು ವಿದೇಶಿ ಪ್ರಜೆಗಳಿಂದ ಬರಾಮತ್ತಾಗಿದ್ದು 2.6 ಕೇಜಿ ಅಕ್ರಮ ಚಿನ್ನ!
ಕಳ್ಳರು ಸಿಂಗಾಪೂರ್ ಕಸ್ಟಮ್ಸ್ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸುವಲ್ಲಿ ಸಫಲರಾದರೂ ಬೆಂಗಳೂರಿನ ಅಧಿಕಾರಿಗಳ ಕಣ್ತಪ್ಪಿಸುವುದು ಸಾಧ್ಯವಾಗಿಲ್ಲ.
ಬೆಂಗಳೂರು: ಕಳ್ಳರು, ವಿದೇಶಗಳಿಂದ ಚಿನ್ನ ಸ್ಮಗ್ಲ್ ಮಾಡುವವರು ಚಾಪೆ ಕೆಳಗೆ ತೂರಿದರೆ ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುವ ಕಸ್ಟಮ್ಸ್ ಅಧಿಕಾರಿಗಳು (customs officials) ರಂಗೋಲಿ ಕೆಳಗೆ ತೂರುತ್ತಾರೆ-ಇದು ಅನೇಕ ಸಲ ಸಾಬೀತಾಗಿರುವ ಅಂಶ. ನಿನ್ನೆ ರಾತ್ರಿ ಬೆಂಗಳೂರಲ್ಲಿ ಏನಾಗಿದೆ ಅಂದ್ರೆ, ವಿದೇಶಿ ಮೂಲದ ಇಬ್ಬರು ಪ್ರಯಾಣಿಕರು ಸಿಂಗಪೂರ್ ನಿಂದ (Singapore) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಬಂದಿಳಿದಿದ್ದಾರೆ. ಅವರಿಬ್ಬರೇ ತಮ್ಮ ಲಗ್ಗೇಜ್ ನೊಂದಿಗೆ ಬಂದಿದ್ದರೆ ಯಾವುದೇ ತಾಪತ್ರಯ ಇರುತ್ತಿರಲಿಲ್ಲ. ಆದರೆ ಮಹಾನುಭಾವರು ತಮ್ಮೊಂದಿಗೆ ಅಕ್ರಮವಾಗಿ 2.600 ಕೇಜಿ ಚಿನ್ನ ತೆಗೆದುಕೊಂಡು ಬಂದಿದ್ದಾರೆ. ಚಿನ್ನ ಕಸ್ಟಮ್ಸ್ ಅಧಿಕಾರಿಗಳ ಕಣ್ಣಿಗೆ ಬೀಳದಂತಿರಲು ಒಂದು ವಿಶೇಷ ಬೆಲ್ಟ್ ವಿನ್ಯಾಸಗೊಳಿಸಿ ಅದರಲ್ಲಿ ಅಡಗಿಸಿಕೊಂಡು ಬಂದಿದ್ದಾರೆ. ಕಳ್ಳರು ಸಿಂಗಾಪೂರ್ ಕಸ್ಟಮ್ಸ್ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸುವಲ್ಲಿ ಸಫಲರಾದರೂ ಬೆಂಗಳೂರಿನ ಅಧಿಕಾರಿಗಳ ಕಣ್ತಪ್ಪಿಸುವುದು ಸಾಧ್ಯವಾಗಿಲ್ಲ. ಸಿಕ್ಕಿಬಿದ್ದು ಅಧಿಕಾರಿಗಳ ವಶದಲ್ಲಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ