''ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ಶಿವಶಂಕರ್ ಅವರಿಗೆ ಸಿಗಬೇಕಿದ್ದ ಗೌರವ ಸಿಗಲಿಲ್ಲ''

”ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ಶಿವಶಂಕರ್ ಅವರಿಗೆ ಸಿಗಬೇಕಿದ್ದ ಗೌರವ ಸಿಗಲಿಲ್ಲ”

ಮಂಜುನಾಥ ಸಿ.
|

Updated on:Jun 27, 2023 | 11:29 PM

CV Shivashankar: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ಹಾಗೂ ಚಿತ್ರಸಾಹಿತಿ ಸಿವಿ ಶಿವಶಂಕರ್ ನಿಧನ ಹೊಂದಿದ್ದು, ಅವರಿಗೆ ಕನ್ನಡ ಚಿತ್ರರಂಗದಿಂದ ಧಕ್ಕಬೇಕಾಗಿದ್ದ ಗೌರವ, ಗುರುತು ಧಕ್ಕಿಲ್ಲ ಎಂದು ಹತ್ತಿರದ ಬಂಧುಗಳು ಹೇಳಿದ್ದಾರೆ.

ಕನ್ನಡ ಚಿತ್ರರಂಗದ (Sandalwood) ಹಿರಿಯ ಬಹುಮುಖ ಪ್ರತಿಭೆ ಸಿವಿ ಶಿವಶಂಕರ್ (CV Shivashankar) ಇಂದು (ಜೂನ್ 27) ನಿಧನರಾಗಿದ್ದಾರೆ. ರಾಜ್​ಕುಮಾರ್ ಅವರ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕ ಆಗಿದ್ರು. ಸಿರಿವಂತನಾದರೂ ಕನ್ನಡ ನಾಡಲ್ಲಿ ಮೆರೆವೆ ಸಾಂಗ್ ಬರೆದಿದ್ದ ಶಿವಶಂಕರ್. ಕುಮಾರಸ್ವಾಮಿ ಲೇಔಟ್​ನ ನಿವಾಸದಲ್ಲಿ ಕೊನೆಯುಸಿರೆಳೆದ ಶಿವಶಂಕರ್. ಆಸ್ಪತ್ರೆಗೆ ಕರದೊಯ್ದರು ಬದುಕುಳಿಯಲಿಲ್ಲ. ಸಿ.ವಿ.ಶಿವಶಂಕರ್ ಅವರಿಗೆ 90 ವರ್ಷ ವಯಸ್ಸಾಗಿತ್ತು. ಶಿವಶಂಕರ್ ಅವರು ಜೀವನದುದ್ದಕ್ಕು ಸ್ವಾಭಿಮಾನದ ಜೀವನ ನಡೆಸಿದವರು. ಅವರಿಗೆ ಸಿಗಬೇಕಾದ ಗೌರವ ಸಿಗಲಿಲ್ಲ ಎಂದು ಅವರ ಹತ್ತಿರದ ಬಂಧುಗಳು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 27, 2023 11:28 PM