ತಮಿಳುನಾಡುಗೆ ನೀರು ಬಿಡುವಂತೆ ಸಿಡಬ್ಲ್ಯೂಎಂಎ ಆದೇಶ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಅದೇ ರಾಗ ಅದೇ ತಾಳ!
ಪ್ರಾಧಿಕಾರ ನೀಡಿದ ಆದೇಶವನ್ನು ಸುಪ್ರೀಮ್ ಕೋರ್ಟ್ ನಲ್ಲಿ ಪ್ರಶ್ನೆ ಮಾಡಬಹುದಾ ಅಂತ ಲೀಗಲ್ ಟೀಮ್ ಜೊತೆ ಚರ್ಚೆ ಮಾಡ್ತೀನಿ ಎನ್ನುವ ಅವರು ಇಂದು ಸಾಯಂಕಾಲ ನಿವೃತ್ತ ಸುಪ್ರೀಮ್ ಕೋರ್ಟ್ ನ್ಯಾಯಾಧೀಶರ ಜೊತೆ ಸಮಸ್ಯೆಯನ್ನು ಮಾತಾಡುವುದಾಗಿ ಹೇಳುತ್ತಾರೆ. ನೀರು ಬಿಡುವುದು ಸಾಧ್ಯವಿಲ್ಲ ಅಂತ ಪಟ್ಟು ಹಿಡಿದು ಕೂತರೆ ಆಗಬಹುದಾದ ಕಾನೂನಾತ್ಮಕ ತೊಡಕು ಯಾವವು ಅನ್ನೋದನ್ನು ಸಿದ್ದರಾಮಯ್ಯ ಚರ್ಚಿಸಬೇಕಿದೆ.
ಬೆಂಗಳೂರು: ಕಾವೇರಿ ನದಿ ನೀರಿನ (Cauvery River Water) ವಿಚಾರದಲ್ಲಿ ಕರ್ನಾಟಕಕ್ಕೆ ಪದೇಪದೆ ಅನ್ಯಾಯವಾಗುತ್ತಿದೆ ಆದರೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪಲಾಯನವಾದಕ್ಕೆ (escapism) ಜೋತು ಬೀಳುತ್ತಿದ್ದಾರೆ. ಅವರಿಲ್ಲಿ ಆಡುವ ಮಾತನ್ನು ಕೇಳಿ. ಇಂದು ದೆಹಲಿಯಲ್ಲಿ ಸಭೆ ನಡೆಸಿದ ಕಾವೇರಿ ನೀರು ನಿರ್ವಾಹಣಾ ಪ್ರಾಧಿಕಾರ ಅಕ್ಟೋಬರ್ 15 ರವರೆಗೆ ಪ್ರತಿದಿನ ತಮಿಳುನಾಡುಗೆ 3,000 ಕ್ಯೂಸೆಕ್ಸ್ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿದೆ. ಇದನ್ನೇ ಪತ್ರಕರ್ತರು ಕೇಳಿದಾಗ ಸಿದ್ದರಾಮಯ್ಯ ನಂಗೊತ್ತಿಲ್ಲ, ಅದರ ಬಗ್ಗೆ ನೀವು ಹೇಳಿದ್ದರಿಂದ ಗೊತ್ತಾಗಿದೆ, ವರದಿ ತರಿಸ್ಕೊಂಡು ನೋಡ್ತೀನಿ ಅನ್ನುತ್ತಾರೆ. ಇದು ಪಲಾಯನವಾದವಲ್ಲದೆ ಮತ್ತೇನು? ವಿಷಯ ಎಲ್ಲರಿಗಿಂತ ಮೊದಲು ಅವರಿಗೆ ತಾನೇ ಗೊತ್ತಾಗೋದು? ಪ್ರಾಧಿಕಾರ ನೀಡಿದ ಆದೇಶವನ್ನು ಸುಪ್ರೀಮ್ ಕೋರ್ಟ್ ನಲ್ಲಿ ಪ್ರಶ್ನೆ ಮಾಡಬಹುದಾ ಅಂತ ಲೀಗಲ್ ಟೀಮ್ ಜೊತೆ ಚರ್ಚೆ ಮಾಡ್ತೀನಿ ಎನ್ನುವ ಅವರು ಇಂದು ಸಾಯಂಕಾಲ ನಿವೃತ್ತ ಸುಪ್ರೀಮ್ ಕೋರ್ಟ್ ನ್ಯಾಯಾಧೀಶರ ಜೊತೆ ಸಮಸ್ಯೆಯನ್ನು ಮಾತಾಡುವುದಾಗಿ ಹೇಳುತ್ತಾರೆ. ನೀರು ಬಿಡುವುದು ಸಾಧ್ಯವಿಲ್ಲ ಅಂತ ಪಟ್ಟು ಹಿಡಿದು ಕೂತರೆ ಆಗಬಹುದಾದ ಕಾನೂನಾತ್ಮಕ ತೊಡಕು ಯಾವವು ಅನ್ನೋದನ್ನು ಸಿದ್ದರಾಮಯ್ಯ ಚರ್ಚಿಸಬೇಕಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ