Karnataka Bandh: ಕಾವೇರಿಯನ್ನು ತನ್ನಮ್ಮ ಎನ್ನುವ ಬೆಂಗಳೂರಿನ ಆಟೋ ಚಾಲಕಿಯ ಮಾತು ಕನ್ನಡಿಗರ ಚೇತನವನ್ನು ಬಡಿದೆಬ್ಬಿಸುತ್ತದೆ!

Karnataka Bandh: ಕಾವೇರಿಯನ್ನು ತನ್ನಮ್ಮ ಎನ್ನುವ ಬೆಂಗಳೂರಿನ ಆಟೋ ಚಾಲಕಿಯ ಮಾತು ಕನ್ನಡಿಗರ ಚೇತನವನ್ನು ಬಡಿದೆಬ್ಬಿಸುತ್ತದೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 29, 2023 | 4:41 PM

Karnataka Bandh: ಸರ್ಕಾರಕ್ಕೆ ನಿಮ್ಮ ಸಂದೇಶವೇನು ಅಂತ ಕೇಳಿದಾಗ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧಿಕಾರದಲ್ಲಿರದಿದ್ದಾಗ ನೀರಿಗಾಗಿ, ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದರು; ಉಪ ಮುಖ್ಯಮಂತ್ರಿಯಾದ ಮೇಲೆ ನಿಷ್ಕ್ರಿಯತೆ ಪ್ರದರ್ಶಿಸುತ್ತಿದ್ದಾರೆ ಎಂದು ಆಟೋಚಾಲಕಿ ಹೇಳಿದರು.

ಬೆಂಗಳೂರು: ಕಾವೇರಿ ನದಿ ನೀರಿನ ವಿಷಯದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಎಲ್ಲ ಕನ್ನಡಿಗರಲ್ಲಿ ಕಿಚ್ಚು ಹೊತ್ತಿಸಿದೆ. ಕಾವೇರಿ ನದಿ ತನ್ನ ಅಮ್ಮ, ತಾಯಿಗೆ ತೊಂದರೆಯಾದಾಗ ಯಾವ ಮಕ್ಕಳು ತಾನೇ ಸಮ್ಮನಿದ್ದಾರು ಎಂದು ಆವೇಶದಲ್ಲಿ ಹೇಳುವ ಈ ಆಟೋರಿಕ್ಷಾ ಚಾಲಕಿ (woman auto rickshaw driver) ಆಡುವ ಪ್ರತಿಯೊಂದು ಮಾತು ಕನ್ನಡಿಗರಲ್ಲದವರಿಗೂ (non Kannadigas) ಸ್ಫೂರ್ತಿದಾಯಕವಾಗಿದೆ. ಇವತ್ತು ಬೆಳಗ್ಗೆಯಿಂದ ಅವರು ತಮ್ಮ ಆಟೋದ ಎರಡೂ ಭಾಗಗಳಲ್ಲಿ ಕನ್ನಡ ಬಾವುಟಗಳನ್ನು (Kannada flags) ಕಟ್ಟಿ ಕನ್ನಡ ನಾಡಿನ ಜೀವ ನದಿ ಹಾಡನ್ನು ಅಟೋದ ಮ್ಯೂಸಿಕ್ ಸಿಸ್ಟಮ್ ನಲ್ಲಿ ನುಡಿಸುತ್ತಾ ನಗರ ಪ್ರದಕ್ಷಿಣೆ ಹಾಕುವ ಮೂಲಕ ಕಾವೇರಿ ನದಿ ನೀರಿಗಾಗಿ ನಡೆಯುತ್ತಿರುವ ಹೋರಾಟದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಹಾಗಂತ ಅವರು ಆಟೋದಲ್ಲಿ ಸವಾರಿ ಹಾಕಿಕೊಂಡು ಓಡಾಡುತ್ತಿದ್ದಾರೆ ಅಂತ ಭಾವಿಸಬೇಡಿ. ಅಸಲಿಗೆ ಹಾಗೆ ಮಾಡುವ ಆಟೋರಿಕ್ಷಾ ಚಾಲಕರಿಗೆ ಆದು ತಪ್ಪು ಅಂತ ಅವರು ಹೇಳುತ್ತಾರೆ. ತಾನು ಕಾವೇರಿ ನದಿಗಾಗಿ ಇದನ್ನು ಮಾಡುತ್ತಿರುವುದರಲ್ಲಿ ವಿಶೇಷತೆ ಏನೂ ಇಲ್ಲ ಎಂದು ನಮ್ರತೆಯಿಂದ ಹೇಳುವ ಅವರು ತಾಯಿ ಕಾವೇರಿಗಾಗಿ ಹೋರಾಡುವುದು ಪ್ರತಿ ಕನ್ನಡಿಗನ ಧರ್ಮ ಅನ್ನುತ್ತಾರೆ. ಸರ್ಕಾರಕ್ಕೆ ನಿಮ್ಮ ಸಂದೇಶವೇನು ಅಂತ ಕೇಳಿದಾಗ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧಿಕಾರದಲ್ಲಿಲ್ಲದಿದ್ದಾಗ ನೀರಿಗಾಗಿ, ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದರು; ಉಪ ಮುಖ್ಯಮಂತ್ರಿಯಾದ ಮೇಲೆ ನಿಷ್ಕ್ರಿಯತೆ ಪ್ರದರ್ಶಿಸುತ್ತಿದ್ದಾರೆ ಎಂದು ಆಟೋಚಾಲಕಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ