AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾವೇರಿ ನದಿಗಾಗಿ ಹೋರಾಟ, ಬುತ್ತುತ್ತಿರುವ ಡ್ಯಾಂಗಳು; ರಾಜ್ಯದ ಪ್ರಮುಖ ನದಿಗಳ ನೀರಿನ ಮಟ್ಟ ಹೀಗಿದೆ

World Rivers Day 2023: ನಮ್ಮ ರಾಜ್ಯದಲ್ಲಿ ಪ್ರಮುಖವಾಗಿ ಕಾವೇರಿ, ಕೃಷ್ಣ, ಮಹದಾಯಿ ನದಿಗಳ ನೀರಿಗಾಗಿ ದಶಕಗಳಿಂದ ಅಂತಾರಾಜ್ಯಗಳ ನಡುವೆ ಹೋರಾಟ ನಡೆಯುತ್ತಿದೆ. ಕಾವೇರಿ ವಿಚಾರವಾಗಿ ಕಳೆದ ಒಂದು ತಿಂಗಳಿಂದ ಹೋರಾಟ ಜೋರಾಗಿದೆ. ಹಾಗಾದರೇ ರಾಜ್ಯದಲ್ಲಿನ ಪ್ರಮುಖ ನದಿಗಳಿಗೆ ಅಡ್ಡಲಾಗಿ ಕಟ್ಟಲಾಗಿರುವ ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ.

ಕಾವೇರಿ ನದಿಗಾಗಿ ಹೋರಾಟ, ಬುತ್ತುತ್ತಿರುವ ಡ್ಯಾಂಗಳು; ರಾಜ್ಯದ ಪ್ರಮುಖ ನದಿಗಳ ನೀರಿನ ಮಟ್ಟ ಹೀಗಿದೆ
ಕೃಷ್ಣ ನದಿ
ವಿವೇಕ ಬಿರಾದಾರ
|

Updated on:Sep 24, 2023 | 12:16 PM

Share

ನದಿಗಳ ದಂಡೆಯಲ್ಲಿ ಅನೇಕ ನಾಗರಿಕತೆಗಳು ಹುಟ್ಟಿವೆ ಹಾಗೇ ನದಿಯಲ್ಲೇ (River) ಮುಳುಗಿ ಹೋಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ಹರಪ್ಪಾ ಮತ್ತ ಮೆಂಜೋದಾರೊ ನಾಗರಿಕತೆಗಳು. ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ, ಜೀವನದಲ್ಲಿ ನದಿಗಳು ತುಂಬಾ ಮಹತ್ವದ ಪಾತ್ರ ವಹಿಸುತ್ತವೆ. ಹುಟ್ಟಿದ ಕ್ಷಣದಿಂದ ಹಿಡಿದು, ಸತ್ತ ಮೇಲೆ ನಮ್ಮ ಅಸ್ತಿಗಳನ್ನ ವಿಸರ್ಜಿಸಲು ನದಿಗಳು ಬೇಕೆ ಬೇಕು. ಭಾರತದಂತ ಪೂಜ್ಯ ಭೂಮಿಯಲ್ಲಿ ನದಿಗಳನ್ನು ದೈವಿ ಸ್ವರೂಪದಲ್ಲಿ ಕಾಣಲಾಗುತ್ತದೆ. ಪ್ರತಿಯೊಂದು ಕಾರ್ಯ ಆರಂಭಕ್ಕೆ ವಿಘ್ನನಿವಾರಕ ಎಷ್ಟು ಮುಖ್ಯನೋ ನದಿಗಳ ನೀರು ಅಷ್ಟೇ ಪ್ರಾಮುಖ್ಯ ವಹಿಸುತ್ತದೆ. ಅದಕ್ಕೆ ಅಲ್ಲವೇ ಪೂಜೆ, ಸ್ನಾನ ಉಪಾದಿ ಸಮಯದಲ್ಲಿ “ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್​ ಸನ್ನಿಧಿಂ ಕುರು” ಎನ್ನುವುದು. ಅಷ್ಟಕ್ಕೂ ಈಗ ಏಕೆ ಈ ಮಾತು ಅಂದರೆ ಇಂದು “ವಿಶ್ವ ನದಿಗಳ ದಿನ” (World Rivers Day) ಎಂದು ಆಚರಿಸಲಾಗುತ್ತದೆ.

ಮೊದಲ ವಿಶ್ವ ನದಿಗಳ ದಿನವು 2005 ರಲ್ಲಿ ಪ್ರಾರಂಭವಾಯಿತು. ಏಕೆಂದರೆ ಯುನೈಟೆಡ್ ನೇಷನ್ಸ್ ಆ ವರ್ಷ ವಾಟರ್ ಫಾರ್ ಲೈಫ್ ದಶಕ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಕೆನಡಾದಲ್ಲಿ ನದಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಮಾರ್ಕ್ ಏಂಜೆಲೊ ಎಂಬ ವ್ಯಕ್ತಿ ಈ ವಿಶೇಷ ದಿನದ ಕಲ್ಪನೆಯನ್ನು ಮುಂದಿಟ್ಟರು. ನಮ್ಮ ರಾಜ್ಯದಲ್ಲಿ ಪ್ರಮುಖವಾಗಿ ಕಾವೇರಿ, ಕೃಷ್ಣ, ಮಹದಾಯಿ ನದಿಗಳ ನೀರಿಗಾಗಿ ದಶಕಗಳಿಂದ ಅಂತಾರಾಜ್ಯಗಳ ನಡುವೆ ಹೋರಾಟ ನಡೆಯುತ್ತಿದೆ. ಕಾವೇರಿ ವಿಚಾರವಾಗಿ ಕಳೆದ ಒಂದು ತಿಂಗಳಿಂದ ಹೋರಾಟ ಜೋರಾಗಿದೆ. ಹಾಗಾದರೇ ರಾಜ್ಯದಲ್ಲಿನ ಪ್ರಮುಖ ನದಿಗಳಿಗೆ ಅಡ್ಡಲಾಗಿ ಕಟ್ಟಲಾಗಿರುವ ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ.

ಇದನ್ನೂ ಓದಿ: ವಿಶ್ವ ನದಿಗಳ ದಿನ 2023: ದಿನಾಂಕ, ಇತಿಹಾಸ, ಮಹತ್ವ ಮತ್ತು ಆಚರಣೆ

  • ಹೇಮಾವತಿ ಜಲಾಶಯ

ಜಲಾಶಯದ ಗರಿಷ್ಠ ನೀರಿನ ಮಟ್ಟ – 2922 ಅಡಿ, ಇಂದಿನ‌ ನೀರಿನ ಮಟ್ಟ – 2896.90 ಅಡಿ, ಒಟ್ಟು ಸಂಗ್ರಹ ಸಾಮರ್ಥ್ಯ – 37.103 ಟಿಎಂಸಿ, ಇಂದಿನ ಸಂಗ್ರಹ ಸಾಮರ್ಥ್ಯ – 17.904 ಟಿಎಂಸಿ, ಬಳಕೆಗೆ ಲಭ್ಯವಿರುವ ನೀರು‌ – 13.565 ಟಿಎಂಸಿ, ಒಳಹರಿವು – 2704 ಸಾವಿರ ಕ್ಯೂಸೆಕ್, ಹೊರಹರಿವು – 1300 ಸಾವಿರ ಕ್ಯೂಸೆಕ್

  • ಹಾರಂಗಿ ಜಲಾಶಯ

ಜಲಾಶಯದ ಗರಿಷ್ಟ ಸಾಮರ್ಥ್ಯ-2859 ಸಾವಿರ ಕ್ಯೂಸೆಕ್, ಇಂದಿನ ಸಾಮರ್ಥ್ಯ – 2856.41 ಸಾವಿರ ಕ್ಯೂಸೆಕ್, ಇಂದಿನ ಒಳಹರಿವು – 1148 ಸಾವಿರ ಕ್ಯೂಸೆಕ್, ಹೊರ ಹರಿವು ನದಿಗೆ- 1600, ನಾಲೆಗೆ -1200 ಕ್ಯೂಸೆಕ್

  • ಆಲಮಟ್ಟಿ ಜಲಾಶಯ (ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ)

ಗರಿಷ್ಟ ಮಟ್ಟ – 519.60 ಅಡಿ, ಇಂದಿನ ನೀರಿನ ಮಟ್ಟ – 518.98 ಅಡಿ, ಒಳ ಹರಿವು – 4,263 ಸಾವಿರ ಕ್ಯೂಸೆಕ್, ಹೊರ ಹರಿವು – 19,321 ಸಾವಿರ ಕ್ಯೂಸೆಕ್, 123.132 ಟಿಎಂಸಿ ನೀರು ಸಂಗ್ರಹದ ಡ್ಯಾಂನಲ್ಲಿ 112.619 ಟಿಎಂಸಿ ನೀರು ಸಂಗ್ರಹವಾಗಿದೆ.

  • ಕೆಆರ್​ಎಸ್ ಜಲಾಶಯ

ಜಲಾಶಯದ ಗರಿಷ್ಠಮಟ್ಟ-124.80 ಅಡಿ, ಇಂದಿನ ಮಟ್ಟ – 96.80 ಅಡಿ, ಒಳಹರಿವು – 6156 ಸಾವಿರ ಕ್ಯೂಸೆಕ್, ಹೊರಹರಿವು – 6511 ಸಾವಿರ ಕ್ಯೂಸೆಕ್

  • ಬಸವ ಸಾಗರ ಜಲಾಶಯ

ಗರಿಷ್ಠ ನೀರಿನ ಮಟ್ಟ – 492.25 ಮೀಟರ್, ಇಂದಿನ ನೀರಿನ ಮಟ್ಟ – 490.91 ಮೀಟರ್, ಒಳ ಹರಿವು – 19503 ಸಾವಿರ ಕ್ಯೂಸೆಕ್, ಹೊರ ಹರಿವು – 9349 ಸಾವಿರ ಕ್ಯೂಸೆಕ್

ವಿಶ್ವ ನದಿಗಳ ದಿನವು ಭೂಮಿಯಲ್ಲಿನ ನದಿಗಳ ಪ್ರಾಮುಖ್ಯತೆ ಬಗ್ಗೆ ಸಾರಿ ಹೇಳುತ್ತದೆ. ಈ ದಿನದಂದು ನದಿಗಳ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಮತ್ತು ರಕ್ಷಿಸುವುದರ ಬಗ್ಗೆ ತಿಳಿಸಲು ಸೂಕ್ತ ದಿನವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:14 pm, Sun, 24 September 23

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?