AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ತಿ ನೋಂದಣಿ ವೇಳೆ ‘ಥಂಬ್’ ನೀಡುವಾಗ ಎಚ್ಚರ: ಸರ್ಕಾರಿ ಕಚೇರಿಯಲ್ಲೇ ನಿಮ್ಮ ಬ್ಯಾಂಕ್​​​​ ಖಾತೆಗೆ ಬೀಳಬಹುದು ಕನ್ನ!

ಜನರ ಬ್ಯಾಂಕ್​​ ಖಾತೆಗೆ ಕನ್ನ ಹಾಕಲು ಖದೀಮರು ನಾನಾ ತಂತ್ರ ಉಪಯೋಗಿಸೋದು ಕೇಳಿರುತ್ತೀರಿ. ಆದ್ರೆ, ಆಸ್ತಿ ನೋಂದಣಿ ಮಾಡಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ಬರುವ ಜನರ ಖಾತೆಗೇ ಕನ್ನ ಹಾಕಲಾಗುತ್ತಿದೆ. ಹೌದು ಅಚ್ಚರಿ ಅನ್ನಿಸಿದರೂ ಸತ್ಯ. ಬಯೋಮೆಟ್ರಿಕ್ ಥಂಬ್​ ನೀಡಿದರೆ ಸಾಕು ನಿಮ್ಮ ಬ್ಯಾಂಕ್​​ ಖಾತೆಯಲ್ಲಿರುವ ಹಣ ಡಮಾರ್ ಆಗುತ್ತೆ. ಅದೂ ಸರ್ಕಾರಿ ಕಚೇರಿಯಲ್ಲೇ ಈ ರೀತಿ ನಡೆಯುತ್ತಿದ್ದು, ಜನ ಸಾವಿರಾರು ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಅದ್ಯಾಗೆ ಅಂತೀರಾ? ಈ ಸ್ಟೋರಿ ನೋಡಿ..

ಆಸ್ತಿ ನೋಂದಣಿ ವೇಳೆ ‘ಥಂಬ್’ ನೀಡುವಾಗ ಎಚ್ಚರ: ಸರ್ಕಾರಿ ಕಚೇರಿಯಲ್ಲೇ ನಿಮ್ಮ ಬ್ಯಾಂಕ್​​​​ ಖಾತೆಗೆ ಬೀಳಬಹುದು ಕನ್ನ!
ಸಾಂದರ್ಭಿಕ ರಜೆ
ಅಶೋಕ್​ ಪೂಜಾರಿ
| Edited By: |

Updated on: Sep 24, 2023 | 11:31 AM

Share

ಮಂಗಳೂರು, (ಸೆಪ್ಟೆಂಬರ್ 24): ಹಲವು ಕಾರಣ ಹೇಳಿ ಫೋನ್​ ಮಾಡಿ ಒಟಿಪಿ ಪಡೆದು, ಹಣ ಲಪಟಾಯಿಸುವುದನ್ನು ನೋಡಿರುತ್ತೀರಾ.. ಆದ್ರೆ, ಇಲ್ಲಿ ಫೋನ್ ಬರುವುದಿಲ್ಲ. ಒಟಿಪಿನೂ ಕೊಡಂಗಿಲ್ಲ. ಬಯೋಮೆಟ್ರಿಕ್ ಥಂಬ್​ ನೀಡಿದರೆ ಸಾಕು ನಿಮ್ಮ ಬ್ಯಾಂಕ್​​ ಖಾತೆಯಲ್ಲಿರುವ ಹಣ ಡಮಾರ್ ಆಗುತ್ತೆ. ಅದೂ ಸರ್ಕಾರಿ ಕಚೇರಿಯಲ್ಲೇ ಈ ರೀತಿ ನಡೆಯುತ್ತಿದ್ದು, ಜನ ಸಾವಿರಾರು ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಹೌದು..ಮಂಗಳೂರಿನ(Manlauru) ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹೀಗೆ ಥಂಬ್​ ನೀಡಿದ ಜನರ ಬ್ಯಾಂಕ್​​ ಖಾತೆಯಿಂದ(Bank Account) 10 ರಿಂದ 40 ಸಾವಿರದವರೆಗೂ ಹಣ ವರ್ಗಾವಣೆ ಆಗಿದೆ.

ಅಕ್ಟೋಬರ್ 1 ರಿಂದ ಆಸ್ತಿ ನೊಂದಣಿ ಶುಲ್ಕ ಏರಿಕೆ ಆಗುತ್ತಿದೆ. ಇದರಿಂದ ಜನರು ಮುಗಿಬಿದ್ದು ಆಸ್ತಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ಖದೀಮರೂ ಕೂಡ ಹಣ ಮಾಡುವುದಕ್ಕೆ ಸರ್ಕಾರಿ ಕಚೇರಿಯನ್ನೇ ಟಾರ್ಗೆಟ್​​ ಮಾಡ್ಕೊಂಡಿದ್ದಾರೆ. ಆಸ್ತಿ ನೋಂದಣಿಗೆ ಆಧಾರ್​ ಪಡೆಯಲು ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾವೇರಿ-2 ಸಾಫ್ಟ್​ವೇರ್​ಗೆ ಥಂಬ್ ನೀಡಬೇಕಾಗುತ್ತದೆ. ಹೀಗೇ ಥಂಬ್ ನೀಡಿದ ಬಳಿಕ ಕಂಪ್ಯೂಟರ್​ನಲ್ಲಿ ಆಧಾರ್ ದಾಖಲೆಗಳು ಪಡೆದು ರಿಜಿಸ್ಟ್ರೇಷನ್ ಪ್ರಕ್ರಿಯೆ ಮುಂದುವರೆಯುತ್ತದೆ. ಆದ್ರೆ, ಮಂಗಳೂರಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹೀಗೆ ಥಂಬ್​ ನೀಡಿದ ಜನರ ಬ್ಯಾಂಕ್​​ ಖಾತೆಯಿಂದ 10 ರಿಂದ 40ಸಾವಿರದವರೆಗೂ ಹಣ ವರ್ಗಾವಣೆ ಆಗಿದೆ. ಈ ಬಗ್ಗೆ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಆದ್ರೆ, ಪೊಲೀಸರು ಮಂಗಳೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದು, ಏನೂ ಸುಳಿವು ಸಿಕ್ಕಿಲ್ಲ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಪೊಲೀಸರ ಹೆಸರಿನಲ್ಲಿ ನಕಲಿ ರೈಡ್ ಮಾಡಿ ದರೋಡೆ ಮಾಡಿದ್ದ ಆರೋಪಿಗಳು ಅರೆಸ್ಟ್

ಆಸ್ತಿ ನೋಂದಣಿ ಮಾಡಬೇಕಾದ್ರೆ 2 ಬಾರಿ ಥಂಬ್​ ನೀಡಬೇಕಾಗಿದೆ. ಮೊದಲು ಕಾವೇರಿ-2 ಸಾಫ್ಟವೇರ್​ನಲ್ಲಿ. ನಂತರ ಮುದ್ರಾಂಕ ಶುಲ್ಕ ಕಟ್ಟಲು. ಆದ್ರೆ, ಜನರು ಕಾವೇರಿ-2 ಸಾಫ್ಟವೇರ್​ನಲ್ಲಿ ಥಂಬ್ ನೀಡಿದ ತಕ್ಷಣವೇ ಅವರ ಬ್ಯಾಂಕ್​​​ ಖಾತೆಯಿಂದ ಹಣ ವರ್ಗಾವಣೆ ಆಗುತ್ತಿದೆಯಂತೆ. ನಿತ್ಯ ಹತ್ತಾರು ಜನರು ಹಣ ಕಳೆದುಕೊಳ್ಳುತ್ತಿದ್ರೂ ಸಬ್ ರಿಜಿಸ್ಟ್ರಾರ್ ಅಧಿಕಾರಿಯಿಂದಾಗಲಿ, ಪೊಲೀಸರಿಂದಾಗಲಿ ಪರಿಹಾರ ಸಿಕ್ಕಿಲ್ಲ.

ಕಾವೇರಿ 2 ಸಾಫ್ಟ್​ವೇರ್​ ಸಂಪೂರ್ಣ ಕಂಟ್ರೋಲ್​ ಸರ್ಕಾರದ ಕೈಲೇ ಇದ್ದು, ಬೆಂಗಳೂರಿನಿಂದಲೇ ಎಲ್ಲ ನಿಯಂತ್ರಣ ಮಾಡಲಾಗುತ್ತಿದೆ. ಹೀಗಾಗಿ ಸರ್ಕಾರದ ಸರ್ವರ್​ಗೇ ಖದೀಮರು ಕನ್ನ ಹಾಕಿದ್ದಾರಾ ಅನ್ನೋ ಅನುಮಾನ ಕಾಡಿದ್ದು.. ತಕ್ಷಣ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಅಶೋಕ್​ ಪೂಜಾರಿ
ಅಶೋಕ್​ ಪೂಜಾರಿ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸ್ಥಳೀಯ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ಟಿವಿ9 ಸುದ್ದಿ ವಾಹಿನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ indiatelevision.com 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್