ಅಮೆರಿಕಾ ಅಧ್ಯಕ್ಷ ಹಸರಿನಲ್ಲಿ ಕರ್ನಾಟಕದಲ್ಲಿ ಕೋಟ್ಯಂತರ ರೂ. ವಂಚನೆ: ಪ್ರಕರಣದ ಮಾಹಿತಿ ಬಿಚ್ಚಿಟ್ಟ ಎಸ್ಪಿ

Updated on: May 26, 2025 | 5:42 PM

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರಂಪ್ ಆ್ಯಪ್​​ ಗೆ ಹಣ ಹಾಕಿದವರಿಗೆ ದುಪ್ಪಟ್ಟು ಹಣ ನೀಡಲಾಗಿದೆ. ಬಡ್ಡಿ ಹಣ ನೀಡಿ ನಂಬಿಕೆ ಗಳಿಸಿಕೊಂಡಿದ್ದ ಸೈಬರ್​ ವಂಚಕರು, ಬಳಿಕ ಜನ ಹೆಚ್ಚಿನ ಲಾಭಾಂಶದ ಆಸೆಗೆ ಬಿದ್ದು ಕೋಟ್ಯಂತರ ರೂ. ಹಣ ಹಾಕಿದ್ದಾರೆ. ಅತ್ತ ಜನರು ಹಣ ಹಾಕುತ್ತಿದ್ದಂತೆ ಸೈಬರ್ ಕಳ್ಳರು ನಾಪತ್ತೆ ಆಗಿದ್ದಾರೆ. ಇನ್ನು ಈ ಸಂಬಂಧ ಹಾವೇರಿ ಜಿಲ್ಲಾ ಪೊಲಿಸ್ ವರಿಷ್ಠಾಧಿಯಕಾರಿ ಪ್ರತಿಕ್ರಿಯಿಸಿ, ಪ್ರಕರಣದ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಹಾವೇರಿ, (ಮೇ 26): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೆಸರಿನಲ್ಲಿ ಸೈಬರ್ ಕಳ್ಳರು ಕೋಟ್ಯಂತರ ರೂ. ವಂಚನೆ ಮಾಡಿರುವ ಘಟನೆ ಹಾವೇರಿ (Haveri) ಜಿಲ್ಲೆಯಲ್ಲಿ ನಡೆದಿದೆ. ರಾಜ್ಯದಲ್ಲಿ ನೂರಾರು ಜನರು ವಂಚನೆಗೊಳಗಾಗಿದ್ದಾರೆ. ಹಾವೇರಿ ಜಿಲ್ಲೆಯ 15ಕ್ಕೂ ಅಧಿಕ ಜನರು ವಂಚನೆಗೆ ಒಳಗಾಗಿದ್ದು, ಬೆಂಗಳೂರು, ಮಂಗಳೂರು, ತುಮಕೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸೈಬರ್ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಮೊದಲು ಟ್ರಂಪ್ ಆ್ಯಪ್​​ ಗೆ ಹಣ ಹಾಕಿದವರಿಗೆ ದುಪ್ಪಟ್ಟು ಹಣ ನೀಡಲಾಗಿದೆ. ಬಡ್ಡಿ ಹಣ ನೀಡಿ ನಂಬಿಕೆ ಗಳಿಸಿಕೊಂಡಿದ್ದ ಸೈಬರ್​ ವಂಚಕರು, ಬಳಿಕ ಜನ ಹೆಚ್ಚಿನ ಲಾಭಾಂಶದ ಆಸೆಗೆ ಬಿದ್ದು ಕೋಟ್ಯಂತರ ರೂ. ಹಣ ಹಾಕಿದ್ದಾರೆ. ಅತ್ತ ಜನರು ಹಣ ಹಾಕುತ್ತಿದ್ದಂತೆ ಸೈಬರ್ ಕಳ್ಳರು ನಾಪತ್ತೆ ಆಗಿದ್ದಾರೆ. ಇನ್ನು ಈ ಸಂಬಂಧ ಹಾವೇರಿ ಜಿಲ್ಲಾ ಪೊಲಿಸ್ ವರಿಷ್ಠಾಧಿಯಕಾರಿ ಪ್ರತಿಕ್ರಿಯಿಸಿ, ಪ್ರಕರಣದ ಮಾಹಿತಿ ಬಿಚ್ಚಿಟ್ಟಿದ್ದಾರೆ.