ಮಂಡ್ಯ ರಸ್ತೆ ಅಪಘಾತದಲ್ಲಿ ಮಗುವಿನ ಸಾವು, ಮೂವರು ಎಎಸ್ಐಗಳನ್ನು ಸಸ್ಪೆಂಡ್ ಮಾಡಿದ ಪೊಲೀಸ್ ವರಿಷ್ಠಾಧಿಕಾರಿ
ಮಗುವಿನ ಸಾವಿಗೆ ಪೊಲೀಸ್ ಸಿಬ್ಬಂದಿಯ ಅಚಾತುರ್ಯ ಮೇಲ್ನೋಟಕ್ಕೆ ಕಾಣುತ್ತಿರುವುದರಿಂದ ಎಎಸ್ಐಗಳಾದ, ಜಯರಾಮ, ನಾಗರಾಜ ಮತ್ತು ಗುರುದೇವ್-ಮೂವರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು. ಸಂಚಾರಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ವಾಹನ ಚಾಲಕರು ಮೇಲ್ನೋಟಕ್ಕೆ ಅಪರಾಧವೆಸಗುತ್ತಿದ್ದಾರೆ ಅಂತ ಕಂಡುಬಂದಲ್ಲಿ ಮಾತ್ರ ವಾಹನಗಳನ್ನು ತಡೆಯುವಂತೆ ಸೂಚಿಸಲಾಗಿದೆ ಎಂದು ಎಸ್ಪಿ ಹೇಳಿದರು.
ಮಂಡ್ಯ, ಮೇ 26: ನಾಯಿ ಕಚ್ಚಿದ್ದ ತಮ್ಮ ಮಗುವನ್ನು ಚಿಕಿತ್ಸೆಗೆಂದು ಪೋಷಕರು ಮದ್ದೂರು ನಿಂದ ಮಂಡ್ಯ ಜಿಲ್ಲಾಸ್ಪತ್ರೆಗೆ ಬೈಕ್ ಮೇಲೆ ಕರೆತರುತ್ತಿದ್ದಾಗ ಮಂಡ್ಯ ಸಂಚಾರಿ ಪೊಲೀಸರಿಂದ ಆದ ಎಡವಟ್ಟಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ವಿಷಾದ ವ್ಯಕ್ತಪಡಿಸಿದ್ದಾರೆ ಮತ್ತು ತಪ್ಪಿತಸ್ಥ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ. ಮಿಮ್ಸ್ ಮುಂದೆ ಮಗುವಿನ ಪೋಷಕರು ಮತ್ತ್ತು ಸಂಬಂಧಿಕರು ಶವವನ್ನಿಟ್ಟುಕೊಂಡಡು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾಗ ಎಸ್ ಪಿ ಸ್ಥಳಕ್ಕೆ ಆಗಮಿಸಿ ಅವರಿಗೆ ಸಾಂತ್ವನ ಹೇಳಿದರು. ಮಾಧ್ಯಮದವರೊಂದಿಗೆ ಮಾತಾಡುವಾಗ ಎಸ್ಪಿ, ಮಗುವಿನ ಸಾವಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಸಿಗಬೇಕೆನ್ನುವುದು ಕುಟುಂಬಸ್ಥರ ಬೇಡಿಕೆಯನ್ನು ತಾನು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿರುವುದಾಗಿ ಹೇಳಿದರು.
ಇದನ್ನೂ ಓದಿ: ಮಂಡ್ಯ: ನಾಪತ್ತೆಯಾಗಿದ್ದ ಪದ್ಮಶ್ರೀ ಪುರಸ್ಕೃತ ಕೃಷಿ ವಿಜ್ಞಾನಿ ಸುಬ್ಬಣ್ಣ ಅಯ್ಯಪ್ಪನ್ ಶವವಾಗಿ ಪತ್ತೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

