Cyclone Beeper Joy: ಗುಜರಾತ್ ಮಾಂಡವೀ ತೀರಕ್ಕೆ ಇಂದು ಅಪ್ಪಳಿಸಲಿದೆ ಬೀಪರ್ ಜಾಯ್ ಚಂಡಮಾರುತ, ಕರ್ನಾಟಕದ ಮೇಲೂ ಬೀರಲಿದೆ ಪ್ರಭಾವ

|

Updated on: Jun 15, 2023 | 10:48 AM

ಬೀಪರ್ ಜಾಯ್ ಸೈಕ್ಲೋನ್ ಮಹಾರಾಷ್ಟ್ರದ ಮುಂಬೈ, ವಲ್ಸಾಡ್ ಮತ್ತು ರತ್ನಗಿರಿ ಜಿಲ್ಲೆಗಳ ಮೇಲೂ ತನ್ನ ಪ್ರಭಾವ ಬೀರಲಿದೆ,

ಗುಜರಾತ್: ಬೀಪರ್ ಜಾಯ್ ಚಂಡಮಾರುತ (Beeper Joy Cyclone) ಗುರುವಾರ ಮಧ್ಯಾಹ್ನದ ನಂತರ ರಾಜ್ಯದ ಮಾಂಡವೀ ತೀರಕ್ಕೆ ಅಪ್ಪಳಿಸಲಿದೆ. ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಕರಾವಳಿ ಪ್ರದೇಶಗಳಾಗಿರುವ (coastal regions) ಕಛ್, ಜುನಾಗಢ್, ದ್ವಾರಕಾ, ಪೋರ್ ಬಂದರ್, ಮಾಂಡವಿ, ಗಾಂಧಿನಗರ, ಮೊರ್ಬಿ, ಸೌರಾಷ್ಟ್ರಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಮತ್ತು ಸುಮಾರು 70,000 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಬೀಪರ್ ಜಾಯ್ ಸೈಕ್ಲೋನ್ ಮಹಾರಾಷ್ಟ್ರದ (Maharashtra) ಮುಂಬೈ, ವಲ್ಸಾಡ್ ಮತ್ತು ರತ್ನಗಿರಿ ಜಿಲ್ಲೆಗಳ ಮೇಲೂ ತನ್ನ ಪ್ರಭಾವ ಬೀರಲಿದೆ. ಚಂಡಮಾರುತದಿಂದಾಗಿ ಕರ್ನಾಟಕದ 9 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಬಹುದೆಂದು ಹವಾಮಾನ ಇಲಾಖೆ ಹೇಳಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on