ದಿತ್ವಾ ಚಂಡಮಾರುತ ಪ್ರಭಾವ: ಕೊಡಗು ಜಿಲ್ಲೆಯ ಹಲವೆಡೆ ಭಾರಿ ಮಳೆ

Updated By: Ganapathi Sharma

Updated on: Dec 04, 2025 | 8:25 AM

Kodagu Rains Video: ಮಡಿಕೇರಿ ನಗರ ಸೇರಿದಂತೆ ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ದಿತ್ವಾ ಚಂಡಮಾರುತದ ಪ್ರಭಾವದಿಂದ ಭಾರಿ ಮಳೆಯಾಗಿದೆ. ಜಿಲ್ಲಾ ಆಡಳಿತ ಮಳೆ ಸಂಬಂಧಿತ ಎಚ್ಚರಿಕೆ ನೀಡಿದ್ದು, ಜನರು ಜಾಗ್ರತೆಯಿಂದ ಇರಬೇಕೆಂದು ಸೂಚಿಸಿದೆ. ಕೊಡಗಿನಲ್ಲಿ ಸುರಿದ ಮಳೆಯ ವಿಡಿಯೋ ಇಲ್ಲಿದೆ ನೋಡಿ.

ಮಡಿಕೇರಿ, ಡಿಸೆಂಬರ್ 4: ದಿತ್ವಾ ಚಂಡಮಾರುತದ ಪರಿಣಾಮ ಮಡಿಕೇರಿ ಸೇರಿದಂತೆ ಕೊಡಗು ಜಿಲ್ಲೆಯ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಬುಧವಾರ ರಾತ್ರಿ 9 ಗಂಟೆಯಿಂದಲೇ ಜಿಲ್ಲೆಯ ಹಲವು ಕಡೆಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಅಕಾಲಿಕ ಮಳೆಯಿಂದ ಕೃಷಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಕೊಯ್ಲಿಗೆ ಬಂದಿದ್ದ ಭತ್ತ ಮತ್ತು ಕಾಫಿ ಬೆಳೆ ಹಾನಿಗೊಳಗಾಗುವ ಆತಂಕ ಎದುರಾಗಿದೆ. ಜೊತೆಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳ ಮೇಲೂ ಮಳೆಯ ಪರಿಣಾಮ ಸ್ಪಷ್ಟವಾಗಿ ಕಾಣಿಸಿಕೊಂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ