Monsoon Raaga: ಡಾಲಿ ಧನಂಜಯ್​ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್​; ಹೇಗಿತ್ತು ನಟನ ರಿಯಾಕ್ಷನ್​?

| Updated By: ಮದನ್​ ಕುಮಾರ್​

Updated on: Sep 03, 2022 | 4:50 PM

Daali Dhananjay: ‘ಮಾನ್ಸೂನ್​ ರಾಗ’ ಸಿನಿಮಾದಲ್ಲಿ ಡಾಲಿ ಧನಂಜಯ್​ ಮತ್ತು ರಚಿತಾ ರಾಮ್​ ಜೋಡಿಯಾಗಿ ನಟಿಸಿದ್ದಾರೆ. ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ.

ನಟ ಡಾಲಿ ಧನಂಜಯ್​ (Daali Dhananjay) ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಟಗರು’ ಚಿತ್ರದ ನಂತರ ಅವರಿಗೆ ಫ್ಯಾನ್ ಫಾಲೋಯಿಂಗ್​ ಹೆಚ್ಚಿದೆ. ಈಗ ‘ಮಾನ್ಸೂನ್​ ರಾಗ’ (Monsoon Raaga) ಸಿನಿಮಾದ ಪ್ರಚಾರದಲ್ಲಿ ಧನಂಜಯ್​ ತೊಡಗಿಕೊಂಡಿದ್ದಾರೆ. ಸೆಪ್ಟೆಂಬರ್​ 16ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಪ್ರಮೋಷನ್ ಸಲುವಾಗಿ ಹಲವು ಸ್ಥಳಗಳಿಗೆ ಡಾಲಿ ಧನಂಜಯ್​ ಭೇಟಿ ನೀಡಿದ್ದಾರೆ. ಈ ವೇಳೆ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಫ್ಯಾನ್ಸ್​ ಮುಗಿಬಿದ್ದಿದ್ದಾರೆ. ಎಷ್ಟೇ ನೂಕು ನುಗ್ಗಲು ಇದ್ದರೂ ಕೂಡ ಎಲ್ಲರಿಗೂ ಡಾಲಿ ಸೆಲ್ಫಿ ನೀಡಿದ್ದಾರೆ. ‘ಮಾನ್ಸೂನ್​ ರಾಗ’ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ರಚಿತಾ ರಾಮ್​ (Rachita Ram) ಅಭಿನಯಿಸಿದ್ದಾರೆ.