‘ಎಲ್ಲಾ ಲಿಂಗಾಯತರು, ಬ್ರಾಹ್ಮಣರು ಮಾಂಸ ತಿಂತಾರಾ ಎಂದು ಕೇಳೋದು ತಪ್ಪು’; ಧನಂಜಯ್
ಡಾಲಿ ಧನಂಜಯ್ ಅವರು ನಾನ್ ವಿಜ್ ತಿಂದ ವಿಷಯ ಸಾಕಷ್ಟು ಚರ್ಚೆ ಆಗಿದೆ. ಈಗ ಅವರು ಒಂದು ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಆಹಾರ ನನ್ನ ಆಯ್ಕೆ ಎಂದು ಅವರು ನೇರ ಮಾತುಗಳಲ್ಲಿ ಹೇಳಿದ್ದಾರೆ. ಹೀಗಿರುವಾಗಲೇ ಅವರು ಲಿಂಗಾಯತರು ಹಾಗೂ ಬ್ರಾಹ್ಮಣರು ಮಾಂಸ ತಿನ್ನುತ್ತಾರಾ ಎಂದು ಪ್ರಶ್ನೆ ಮಾಡಬಾರದು ಎಂದಿದ್ದಾರೆ.
ಲಿಂಗಾಯತ ಆಗಿ ಧನಂಜಯ್ ಅವರು ಮಾಂಸ ತಿಂದಿದ್ದು ಚರ್ಚೆಗೆ ಕಾರಣ ಆಯಿತು. ಈ ವಿಡಿಯೋ ಸಾಕಷ್ಟು ವೈರಲ್ ಆಯಿತು. ಆದರೆ ಆಹಾರ ಎನ್ನೋದು ಅವರವರ ಆಯ್ಕೆ ಎಂದು ಧನಂಜಯ್ ನಂಬುತ್ತಾರೆ. ಅವರ ಬಳಿ ಹೋಗಿ ಏನು ತಿಂತೀರಿ ಎಂದು ಕೇಳಿದರೆ ಅವರು ಖುಷಿಯಿಂದ ಅದನ್ನು ವಿವರಿಸುತ್ತಾರಂತೆ. ‘ಧನಂಜಯ್ ನಾನ್ವೆಜ್ ತಿಂತಾರಾ ಎಂದು ಕೇಳೋದು ತಪ್ಪಲ್ಲ. ಆದರೆ, ಲಿಂಗಾಯುತರು, ಬ್ರಾಹ್ಮಣರೆಲ್ಲ ಮಾಂಸ ತಿಂತಾರಾ ಎಂದು ಕೇಳೋದು ತಪ್ಪು’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
