ಧನಂಜಯ ಕಟ್ಟಿದ ತಾಳಿ ಕಣ್ಣಿಗೆ ಒತ್ತಿಕೊಂಡ ಧನ್ಯತಾ; ಇದು ಭಾವುಕ ಕ್ಷಣ
ಡಾಕ್ಟರ್ ಧನ್ಯತಾ ಅವರ ಕೊರಳಿಗೆ ನಟ ಡಾಲಿ ಧನಂಜಯ ತಾಳಿ ಕಟ್ಟಿದ್ದಾರೆ. ಈ ಕ್ಷಣದಲ್ಲಿ ಧನ್ಯತಾ ಅವರು ಭಾವುಕರಾಗಿದ್ದಾರೆ. ಗಂಡ ಕಟ್ಟಿದ ತಾಳಿಯನ್ನು ಧನ್ಯತಾ ಅವರು ಕಣ್ಣಿಗೆ ಒತ್ತಿಕೊಂಡರು. ಇಬ್ಬರ ಬಾಳಿನಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಸಖತ್ ಗ್ರ್ಯಾಂಡ್ ಆಗಿ ಮದುವೆ ನಡೆದಿದೆ.
ಡಾಲಿ ಧನಂಜಯ ಮತ್ತು ಧನ್ಯತಾ ಅವರ ಹಸೆಮಣೆ ಏರಿದ್ದಾರೆ. ಇಂದು (ಫೆ.16) ಮೈಸೂರಿನಲ್ಲಿ ವಿವಾಹ ನಡೆದಿದೆ. ಧನಂಜಯ ಅವರು ತಾಳಿ ಕಟ್ಟುತ್ತಿದ್ದಂತೆಯೇ ಧನ್ಯತಾ ಎಮೋಷನಲ್ ಆಗಿದ್ದಾರೆ. ತಾಳಿಯನ್ನು ಕಣ್ಣಿಗೆ ಒತ್ತಿಕೊಂಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ. ಅಭಿಮಾನಿಗಳು, ಆಪ್ತರು, ಕುಟುಂಬದವರು ನವ ದಂಪತಿಗೆ ಆಶೀರ್ವಾದ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.