Daily Devotional: ಆರೋಗ್ಯಕ್ಕೂ ಒಳ್ಳೆಯದು, ನಾಲಿಗೆಗೂ ಹಿತವಾದ ಬಿಳಿ ಎಳ್ಳಿನ ಮಹತ್ವ

|

Updated on: May 17, 2024 | 7:07 AM

ಬಿಳಿ ಎಳ್ಳು ಆರೋಗ್ಯಕ್ಕೂ ಒಳ್ಳೆಯದು, ನಾಲಿಗೆಗೂ ಹಿತ! ಇಂಥ ಎಳ್ಳು ತನ್ನಲ್ಲಿ ಸಾಕಷ್ಟು ಉಪಯೋಗಗಳನ್ನು ಹುದುಗಿಸಿಕೊಂಡಿದೆ. ಎಳ್ಳಿನ ಮಹತ್ವದ ಕುರಿತು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

ಎಳ್ಳು ಭಾರತದ ಅಂತ್ಯಂತ ಪ್ರಾಚೀನ ಧಾನ್ಯ. ಇದು ಪಿಡಾಲಿಯೇಸಿ ವರ್ಗಕ್ಕೆ ಸೇರಿದ ಸೆಸ್ಸಾಮಮ್ ಇಂಡಿಕಮ್ ಎಂಬ ಏಕವಾರ್ಷಿಕ ಸಸ್ಯ ಪ್ರಭೇದ. ಈ ಸಸ್ಯದ ಮೂಲದ ವಿಚಾರದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ವೇದಗಳಲ್ಲಿ ಇದಕ್ಕೆ ‘ತಿಲ’ ಎಂಬ ಪದ ಪ್ರಯೋಗವಿದೆ. ಹಿಂದು ಸಂಪ್ರದಾಯದಲ್ಲಿ ಎಳ್ಳಿಗೆ ತನ್ನದೇ ಆದ ಮಹತ್ವದ ಸ್ಥಾನವಿದೆ. ಇದು ಗಾತ್ರದಲ್ಲಿ ಚಿಕ್ಕದಾದರೂ ಮಹತ್ವದ ಸಾಂಬಾರ ಪದಾರ್ಥವಾಗಿ ಹೆಸರು ಪಡೆದಿದ್ದು, ರುಚಿಗೂ ಸೈ. ಆರೋಗ್ಯಕ್ಕೂ ಒಳ್ಳೆಯದು, ನಾಲಿಗೆಗೂ ಹಿತ! ಇಂಥ ಎಳ್ಳು ತನ್ನಲ್ಲಿ ಸಾಕಷ್ಟು ಉಪಯೋಗಗಳನ್ನು ಹುದುಗಿಸಿಕೊಂಡಿದೆ. ಎಳ್ಳಿನ ಮಹತ್ವದ ಕುರಿತು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.