ಖರೀದಿ ನೆಪದಲ್ಲಿ ಶಾಪ್‌ಗೆ ಬಂದು 15 ಕೆ.ಜಿ ತುಪ್ಪ ಕದ್ದ ಕಳ್ಳರು; ವಿಡಿಯೋ ವೈರಲ್​

ಖರೀದಿ ನೆಪದಲ್ಲಿ ಶಾಪ್‌ಗೆ ಬಂದು 15 ಕೆ.ಜಿ ತುಪ್ಪ ಕದ್ದ ಕಳ್ಳರು; ವಿಡಿಯೋ ವೈರಲ್​

Jagadisha B
| Updated By: ಕಿರಣ್ ಹನುಮಂತ್​ ಮಾದಾರ್

Updated on: May 16, 2024 | 8:46 PM

ನಗರದ ಕೊಮ್ಮಘಟ್ಟ ರಸ್ತೆಯ ಸ್ಯಾಟ್​ಲೈಟ್ ಕ್ಲಬ್ ಬಳಿ ಮಧ್ಯಾಹ್ನ 2.30ರ ಸುಮಾರಿಗೆ ಖರೀದಿ ನೆಪದಲ್ಲಿ ಬಂದ ಕಳ್ಳರು, 15 ಕೆ.ಜಿ ತುಪ್ಪವನ್ನು ಕದ್ದು ಪರಾರಿಯಾಗಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ಬೈಕ್​ನಲ್ಲಿ ಬಂದಿದ್ದ ಇಬ್ಬರು ಖದೀಮರು ಕ್ಷಣಾರ್ಧದಲ್ಲಿ ಬಂದು ತುಪ್ಪ ಕಳ್ಳತನ ಮಾಡಿದ್ದಾರೆ. ಕಳ್ಳರ ಕಳ್ಳಾಟದ ಇಂಚಿಂಚು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೆಂಗಳೂರು, ಮೇ.16: ನಗರದ ಕೊಮ್ಮಘಟ್ಟ(Kommaghatta)  ರಸ್ತೆಯ ಸ್ಯಾಟ್​ಲೈಟ್ ಕ್ಲಬ್ ಬಳಿ ಮಧ್ಯಾಹ್ನ 2.30ರ ಸುಮಾರಿಗೆ ಖರೀದಿ ನೆಪದಲ್ಲಿ ಬಂದ ಕಳ್ಳರು, 15 ಕೆ.ಜಿ ತುಪ್ಪ(Ghee)ವನ್ನು ಕದ್ದು ಪರಾರಿಯಾಗಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ಬೈಕ್​ನಲ್ಲಿ ಬಂದಿದ್ದ ಇಬ್ಬರು ಖದೀಮರು ಕ್ಷಣಾರ್ಧದಲ್ಲಿ ಬಂದು ತುಪ್ಪ ಕಳ್ಳತನ ಮಾಡಿದ್ದಾರೆ. ಕಳ್ಳರ ಕಳ್ಳಾಟದ ಇಂಚಿಂಚು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರ್ಯಕ್ರಮವೊಂದಕ್ಕೆ ತುಪ್ಪ ಬೇಕು ಎಂದು ನಂದಿನಿ ಸ್ಟೋರಿಗೆ ಬಂದ ಕಳ್ಳರು, 15 ಕೆಜಿ ತುಪ್ಪ ಪಡೆದು ಬ್ಯಾಗ್ ನಲ್ಲಿ ಹಾಕಿಕೊಂಡಿದ್ದಾರೆ. ಬಳಿಕ ಪೇಡಾ ಬೇಕು ಆರು ಬಾಕ್ಸ್ ಕೊಡಿ ಎಂದಿದ್ದರು. ಅದರಂತೆ ಪೇಡ ಬಾಕ್ಸ್ ಕೊಡಲು ಡಬ್ಬದ ಕಡೆ ತಿರುಗಿದ್ದ ಸಿಬ್ಬಂದಿ, ಈ ವೇಳೆ 15 ಕೆಜಿ ತುಪ್ಪ ಇದ್ದ ಬ್ಯಾಗ್ ಸಮೇತ ಕಳ್ಳರು ಎಸ್ಕೇಪ್ ಆಗಿದ್ದಾರೆ. ಕೂಡಲೇ ಅಂಗಡಿ ಸಿಬ್ಬಂದಿಗಳು ಕಳ್ಳರ ಬೆನ್ನು ಬಿದ್ದಿದ್ದಾರೆ. ಜೊತೆಗೆ ಮೂರು ಕಿ.ಮೀ ಫಾಲೋ ಕೂಡ ಮಾಡಿದರೂ ಕಣ್ತಪ್ಪಿಸಿ ಎಸ್ಕೇಪ್ ಆಗಿದ್ದು, ಘಟನೆ ಸಂಬಂಧ ಅಂಗಡಿ ಸಿಬ್ಬಂದಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆ ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ