ಈ ಭೂಪ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪಾರ್ಕಾಗಿದ್ದ ಪೊಲೀಸ್ ವಾಹನವನ್ನು ಕಳುವು ಮಾಡಲು ಪ್ರಯತ್ನಿಸಿದ!
ಅದನ್ನು ಗಮನಿಸಿದ ಸೋನು ಶರ್ಟ್ ಜೇಬಲ್ಲಿದ್ದ ವಾಹನದ ಕೀ ಅನಾಮತ್ತಾಗಿ ಎತ್ತಿ ಅದನ್ನು ಸ್ಟಾರ್ಟ್ ಮಾಡಿದ್ದಾನೆ. ಎಂಜಿನ್ ಸ್ಟಾರ್ಟ್ ಆದ ಶಬ್ದಕ್ಕೆ ನಿದ್ರಿಸುತ್ತಿದ್ದ ಪೊಲೀಸ್ ಗೆ ಎಚ್ಚರವಾಗಿದೆ. ಕೂಡಲೇ ಅವರು ಕ್ಯಾಬಿನ್ ಬಳಿ ಹೋಗಿ ಸೋನುನನ್ನು ವಶಕ್ಕೆ ಪಡೆದಿದ್ದಾರೆ. ನಗರದ ಪೊಲೀಸ್ ಠಾಣೆಯೊಂದರಲ್ಲಿ ಸೋನು ತಾನು ಪ್ರದರ್ಶಿಸಿದ ಧೈರ್ಯಕ್ಕೆ ‘ಆದರಾತಿಥ್ಯ’ ಸ್ವೀಕರಿಸುತ್ತಿದ್ದಾನೆ!
ಕಲಬುರಗಿ: ಎಂಟೆದೆಯವರ ಬಗ್ಗೆ ನೀವು ಕೇಳಿರುತ್ತೀರಿ ಅದರೆ ನಾವಿಲ್ಲಿ ಮಾತಾಡುತ್ತಿರೋದು ಹನ್ನೆರಡು ಎದೆಯುಳ್ಳವನ ಕುರಿತು. ಪೊಲೀಸ್ ಕಮೀಶನರ್ ಕಚೇರಿ (police commissioner office) ಆವರಣದಲ್ಲಿ ಪಾರ್ಕ್ ಆಗಿದ್ದ ಪೊಲೀಸ್ ವಾಹನವನ್ನು ಪೊಲೀಸೊಬ್ಬರ ಜೇಬಿನಲ್ಲಿದ್ದ ಕೀ ಕದ್ದು ಅದನ್ನು ಅಪಹರಿಸಲು ಪ್ರಯತ್ನಿಸುವವ ಹನ್ನೆರಡೆದೆಯವನಲ್ಲದೆ ಮತ್ತೇನು? ಅಂದಹಾಗೆ, ಈ ಪರಾಕ್ರಮಿ ಕಳ್ಳ ಛತ್ತೀಸ್ ಗಢ್ (Chhattisgarh) ಮೂಲದವನು ಮತ್ತು ಹೆಸರು ಸೋನು ಭಗೀರಥ್ (Sonu Bhagirath). ನಗರದಲ್ಲಿ ಇವನು ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದನಂತೆ. ಕಲಬುರಗಿ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಕೆಎ-32 ಜಿ-1550 ಪಾರ್ಕ್ ಮಾಡಿದ್ದ ಪೊಲೀಸ್ ಕಾನ್ ಸ್ಟೇಬಲ್ ಒಬ್ಬರು ವಾಹನದ ಕಿಟಕಿಗೆ ತಮ್ಮ ಶರ್ಟ್ ನೇತು ಹಾಕಿ ವಾಹನದೊಳಗೆ ನಿದ್ರಿಸುತ್ತಿದ್ದರು. ಅದನ್ನು ಗಮನಿಸಿದ ಸೋನು ಶರ್ಟ್ ಜೇಬಲ್ಲಿದ್ದ ವಾಹನದ ಕೀ ಅನಾಮತ್ತಾಗಿ ಎತ್ತಿ ಅದನ್ನು ಸ್ಟಾರ್ಟ್ ಮಾಡಿದ್ದಾನೆ. ಎಂಜಿನ್ ಸ್ಟಾರ್ಟ್ ಆದ ಶಬ್ದಕ್ಕೆ ನಿದ್ರಿಸುತ್ತಿದ್ದ ಪೊಲೀಸ್ ಗೆ ಎಚ್ಚರವಾಗಿದೆ. ಕೂಡಲೇ ಅವರು ಕ್ಯಾಬಿನ್ ಬಳಿ ಹೋಗಿ ಸೋನುನನ್ನು ವಶಕ್ಕೆ ಪಡೆದಿದ್ದಾರೆ. ನಗರದ ಪೊಲೀಸ್ ಠಾಣೆಯೊಂದರಲ್ಲಿ ಸೋನು ತಾನು ಪ್ರದರ್ಶಿಸಿದ ಧೈರ್ಯಕ್ಕೆ ‘ಆದರಾತಿಥ್ಯ’ ಸ್ವೀಕರಿಸುತ್ತಿದ್ದಾನೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Bengaluru: ಸುಮಾರು ರೂ. 60 ಲಕ್ಷ ಮೌಲ್ಯದ ಕೈಗಡಿಯಾರಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಖದೀಮರು ಪೊಲೀಸ್ ವಶಕ್ಕೆ