Nitya Bhakti: ದೇವರ ಮುಂದೆ ಕಣ್ಣೀರು ಹಾಕಿದ್ರೆ ಏನಾಗುತ್ತೆ ಗೊತ್ತಾ?

Nitya Bhakti: ದೇವರ ಮುಂದೆ ಕಣ್ಣೀರು ಹಾಕಿದ್ರೆ ಏನಾಗುತ್ತೆ ಗೊತ್ತಾ?

Ganapathi Sharma
|

Updated on: Oct 24, 2024 | 6:26 AM

ಹಿಂದೂ ಧರ್ಮದಲ್ಲಿ ಪ್ರಾರ್ಥನೆಗೆ ಬಹಳ ಮಹತ್ವವಿದೆ. ಕೈಮುಗಿದು ದೇವರನ್ನು ಪ್ರಾರ್ಥನೆ ಮಾಡುವುದು ಬಹಳ ಮುಖ್ಯವಾದ ವಿಚಾರವಾಗಿದೆ. ಇನ್ನು ಹಲವು ಸಂಕಷ್ಟದ ಸಂದರ್ಭಗಳಲ್ಲಿ ಭಕ್ತರು ದೇವರ ಮುಂದೆ ಕಣ್ಣೀರು ಹಾಕುವ ಪ್ರಸಂಗಗಳೂ ಇವೆ. ಹೀಗೆ ಮಾಡಿದರೆ ಏನಾಗುತ್ತದೆ ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ.

ನಾವು ಕಷ್ಟ ಬಂದಾಗ, ತೀವ್ರ ಸಂಕಷ್ಟದಲ್ಲಿದ್ದಾಗ ದೇವರ ಮುಂದೆ ಕಣ್ಣೀರು ಹಾಕಿ ಪ್ರಾರ್ಥನೆ ಮಾಡುತ್ತೇವೆ. ಆದರೆ, ಸಾಮಾನ್ಯ ಸಂದರ್ಭಗಳಲ್ಲಿ ದೇವರ ಮುಂದೆ ಪ್ರಾರ್ಥನೆ ಮಾಡುತ್ತೇವೆ, ಆದರೆ ಕಣ್ಣೀರು ಹಾಕುವುದಿಲ್ಲ. ಹಾಗೆಂದು, ವಾರಕ್ಕೊಮ್ಮೆಯಾದರೂ ಶುದ್ಧ ಮನಸಿನಿಂದ ದೇವರ ಎದುರು ಕಣ್ಣೀರಿಟ್ಟು ಪ್ರಾರ್ಥನೆ ಮಾಡಿದರೆ ಅದರಿಂದ ಅಗಾಧ ಪರಿಣಾಮವಿದೆ ಎನ್ನುತ್ತಾರೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ. ಅದು ಹೇಗೆ ಪರಿಣಾಮ ಬೀರುತ್ತದ? ಯಾವ ರೀತಿ ಕಣ್ಣೀರಿಟ್ಟು ಪ್ರಾರ್ಥನೆ ಮಾಡಬೇಕು ಎಂಬುದನ್ನು ಅವರು ಇಲ್ಲಿ ವಿವರಿಸಿದ್ದಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ವಿಚಾರಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ