Daily Devotional: ಚಿಕ್ಕ ಮಕ್ಕಳಿಗೆ ದೃಷ್ಟಿ ತೆಗೆಯುವುದರ ಹಿಂದೆ ಇರುವ ಮಹತ್ವ ತಿಳಿಯಿರಿ
ಮಕ್ಕಳು ಅಳುತ್ತಿದ್ದರೆ ಅಥವಾ ಮಂಕಾಗಿದ್ದರೆ ಮನೆಯ ಹಿರಿಯರಯ ದೃಷ್ಟಿಯಾಗಿದೆ, ದೃಷ್ಟಿ ತೆಗೆದರೆ ಎಲ್ಲ ಸರಿ ಹೋಗುತ್ತದೆ ಎಂದು ಸಲಹೆ ನೀಡುತ್ತಾರೆ. ದೃಷ್ಟಿ ಏಕೆ ತೆಗೆಯಬೇಕು? ದೃಷ್ಟಿ ತೆಗೆಯುವುದರಿಂದ ಮಕ್ಕಳು ಲವಲವಿಕೆಯಿಂದ ಇರುತ್ತಾರಾ? ದೃಷ್ಟಿ ತೆಗೆಯುವ ಕ್ರಮಗಳೇನು? ಎಂಬುವುದರ ಕುರಿತು ಬಸವರಾಜ ಗುರೂಜಿ ತಿಳಿಸಿದ್ದಾರೆ.
ಹೊರಗಡೆ ಸುತ್ತಾಡಿ, ಎಲ್ಲರಿಂದ ಮುದ್ದು ಮಾಡಿಸಿಕೊಂಡು ಮನೆಗೆ ಬಂದ ಮಗು ಒಂದೇ ಸಮನೆ ಅಳಲು ಶುರು ಮಾಡಿ, ಜ್ವರಕ್ಕೆ ತುತ್ತಾಗಿ, ಮಂಕಾಗುತ್ತದೆ. ಆಗ ಅಮ್ಮಂದಿರು ಗಾಬರಿಗೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಮನೆಯ ಹಿರಿಯರು ಮಗುವಿಗೆ ದೃಷ್ಟಿಯಾಗಿದೆ, ದೃಷ್ಟಿ ತೆಗೆದರೆ ಎಲ್ಲ ಸರಿ ಹೋಗುತ್ತದೆ ಎಂಬ ಸಲಹೆ ನೀಡುತ್ತಾರೆ. ಕೆಲವುರ ಮಕ್ಕಳಿಗೆ ಪ್ರತಿದಿನ ದೃಷ್ಟಿ ತೆಗೆಯುತ್ತಾರೆ. ಇನ್ನೂ ಕೆಲವರು ವಾರಕ್ಕೊಮ್ಮೆ ಅಥವಾ ಎಲ್ಲಾದರು ಹೊರಗಡೆ ಹೋಗಿ ಬಂದಾಗ ದೃಷ್ಟಿ ತೆಗೆಯುವ ಕ್ರಮ ರೂಢಿಸಿಕೊಂಡಿರುತ್ತಾರೆ. ದೃಷ್ಟಿ ಏಕೆ ತೆಗೆಯಬೇಕು? ದೃಷ್ಟಿ ತೆಗೆಯುವುದರಿಂದ ಮಕ್ಕಳು ಲವಲವಿಕೆಯಿಂದ ಇರುತ್ತಾರಾ? ದೃಷ್ಟಿ ತೆಗೆಯುವ ಕ್ರಮಗಳೇನು? ಎಂಬುವುದರ ಕುರಿತು ಬಸವರಾಜ ಗುರೂಜಿ ತಿಳಿಸಿದ್ದಾರೆ.