Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಶೇಖ್ ಹಸೀನಾ ಪರಾರಿಯಾಗುತ್ತಿದ್ದಂತೆ ಪ್ರಧಾನಿ ನಿವಾಸದಲ್ಲಿ ಶಾಪಿಂಗ್ ಮಾಡಿದ ಜನ!

Viral Video: ಶೇಖ್ ಹಸೀನಾ ಪರಾರಿಯಾಗುತ್ತಿದ್ದಂತೆ ಪ್ರಧಾನಿ ನಿವಾಸದಲ್ಲಿ ಶಾಪಿಂಗ್ ಮಾಡಿದ ಜನ!

ಸುಷ್ಮಾ ಚಕ್ರೆ
|

Updated on: Aug 05, 2024 | 10:51 PM

Bangladesh Violence: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶ ಬಿಟ್ಟು ಹೋದ ಸುದ್ದಿ ಕೇಳಿದ ಜನರು ಖುಷಿಯಿಂದ ಢಾಕಾದಲ್ಲಿರುವ ಪ್ರಧಾನಿ ಬಂಗಲೆಗೆ ತೆರಳಿ ಕೈಗೆ ಸಿಕ್ಕಿದ್ದನ್ನೆಲ್ಲ ತಿಂದು, ಕುಡಿದು, ಮಜಾ ಮಾಡಿ, ಅಲ್ಲಿರುವ ವಸ್ತುಗಳನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ.

ಬಾಂಗ್ಲಾದೇಶದಿಂದ ಶೇಖ್ ಹಸೀನಾ ಪರಾರಿಯಾಗಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಅಲ್ಲಿ ಜನರು ಸಂಭ್ರಮಾಚರಣೆ ಮಾಡಿದ್ದಾರೆ. ಲಕ್ಷಾಂತರ ಜನರು ಪ್ರಧಾನಿಯವರ ಅಧಿಕೃತ ಸರ್ಕಾರಿ ಬಂಗಲೆಗೆ ನುಗ್ಗಿ, ಅಲ್ಲಿರುವ ಪೀಠೋಪಕರಣ, ಅಡುಗೆಮನೆಯ ವಸ್ತುಗಳು, ಬಾತುಕೋಳಿ, ಶೇಖ್ ಹಸೀನಾ ಅವರ ಸೀರೆ, ಒಡವೆಗಳು ಎಲ್ಲವನ್ನೂ ದೋಚಿಕೊಂಡು ಹೋಗಿದ್ದಾರೆ. ಶೇಖ್ ಹಸೀನಾ ಅವರ ಅಡುಗೆಮನೆಯಲ್ಲಿದ್ದ ಸ್ವೀಟ್​ಗಳನ್ನು ತಿನ್ನುತ್ತಾ ಅನೇಕರು ರೀಲ್ಸ್ ಮಾಡಿದ್ದಾರೆ. ಇನ್ನು ಕೆಲವರು ಪ್ರಧಾನಿಯ ಬೆಡ್​ರೂಂನಲ್ಲಿ ಮಲಗಿ ವಿಡಿಯೋ ಮಾಡಿಕೊಂಡಿದ್ದಾರೆ. ಶೇಖ್ ಹಸೀನಾ ಅವರ ಸೀರೆಗಳಿರುವ ಸೂಟ್​ಕೇಸ್ ಎತ್ತಿಕೊಂಡು ಹೊರಟ ವ್ಯಕ್ತಿಯೊಬ್ಬ ನನ್ನ ಹೆಂಡತಿಗೂ ಈ ಸೀರೆ ಉಡಿಸಿ ಪ್ರಧಾನಿಯಾಗಿ ಮಾಡುತ್ತೇನೆ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.

ಶೇಖ್ ಹಸೀನಾ ರಾಜೀನಾಮೆ ನೀಡಿ, ದೇಶ ಬಿಟ್ಟು ಪರಾರಿಯಾಗುತ್ತಿದ್ದಂತೆ ಢಾಕಾದಲ್ಲಿರುವ ಪಿಎಂ ಪ್ಯಾಲೇಸ್‌ಗೆ ನುಗ್ಗಿದ ಪ್ರತಿಭಟನಾಕಾರರು ಶೇಖ್ ಹಸೀನಾ ಅವರ ಸೀರೆ, ಒಳಉಡುಪು, ಬ್ಲೌಸ್​ಗಳನ್ನೂ ಬಿಡದೆ ಎಲ್ಲವನ್ನೂ ಕದ್ದು, ಅದರ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ಸೋಫಾ, ಹಸಿ ಮೀನು, ಕೋಳಿ, ಬಾತುಕೋಳಿ, ಕುರಿ, ಫ್ಯಾನ್ ಎಲ್ಲವನ್ನೂ ತೆಗೆದುಕೊಂಡು ಜಾತ್ರೆಯಿಂದ ಮನೆಗೆ ಹೊರಟಂತೆ ರಸ್ತೆಗಳಲ್ಲಿ ನಡೆದುಕೊಂಡೇ ಮನೆಯತ್ತ ಮೆರವಣಿಗೆ ಹೊರಟಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ