Daily Devotional: ಶನಿಗ್ರಹ ಇತರ ಗ್ರಹದೊಂದಿಗೆ ಇದ್ರೆ ಯಾವ ಖಾಯಿಲೆ ಬರುತ್ತೆ ಗೊತ್ತಾ?
ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ಭಗವಾನರನ್ನು ಪ್ರಮುಖ ಗ್ರಹವೆಂದು ಪರಿಗಣಿಸಲಾಗಿದೆ. ಶನಿ ಒಂದು ರಾಶಿಯಲ್ಲಿ ಎರಡುವರೆ ವರ್ಷ ಸ್ಥಿತನಾಗಿದ್ದು, ಅದರ ಸಂಚಾರ ಮತ್ತು ದೃಷ್ಟಿಯು ವ್ಯಕ್ತಿಯ ಜೀವನದ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ಶನಿಯು ಏಕಾಂಗಿಯಾಗಿರುವಾಗ ವಾತ ಕಾಯಿಲೆಗಳು, ನರ ದೌರ್ಬಲ್ಯ, ಪ್ಯಾರಾಲಿಸಿಸ್, ಕಿಡ್ನಿ ವೈಫಲ್ಯ, ಅಜೀರ್ಣ ಮತ್ತು ಕೂದಲು ಉದುರುವಿಕೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳನ್ನು ನೀಡಬಹುದು.
ಬೆಂಗಳೂರು, ಜನವರಿ 14: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ಭಗವಾನರನ್ನು ಪ್ರಮುಖ ಗ್ರಹವೆಂದು ಪರಿಗಣಿಸಲಾಗಿದೆ. ಶನಿ ಒಂದು ರಾಶಿಯಲ್ಲಿ ಎರಡುವರೆ ವರ್ಷ ಸ್ಥಿತನಾಗಿದ್ದು, ಅದರ ಸಂಚಾರ ಮತ್ತು ದೃಷ್ಟಿಯು ವ್ಯಕ್ತಿಯ ಜೀವನದ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ಶನಿಯು ಏಕಾಂಗಿಯಾಗಿರುವಾಗ ವಾತ ಕಾಯಿಲೆಗಳು, ನರ ದೌರ್ಬಲ್ಯ, ಪ್ಯಾರಾಲಿಸಿಸ್, ಕಿಡ್ನಿ ವೈಫಲ್ಯ, ಅಜೀರ್ಣ ಮತ್ತು ಕೂದಲು ಉದುರುವಿಕೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳನ್ನು ನೀಡಬಹುದು.
ಇತರೆ ಗ್ರಹಗಳೊಂದಿಗೆ ಶನಿ ಸಂಯೋಗಗೊಂಡಾಗ, ವಿಭಿನ್ನ ರೀತಿಯ ಅನಾರೋಗ್ಯಗಳು ಮತ್ತು ತೊಂದರೆಗಳು ಉಂಟಾಗಬಹುದು. ಉದಾಹರಣೆಗೆ, ರವಿಯೊಂದಿಗೆ ಶನಿ ಸೇರಿದಾಗ ದೃಷ್ಟಿದೋಷ, ಆಲಸ್ಯ, ಅಧಿಕಾರಿಗಳಿಂದ ತೊಂದರೆಗಳು ಕಾಣಿಸಬಹುದು. ಚಂದ್ರನೊಂದಿಗೆ ಸಂಯೋಗಗೊಂಡಾಗ ಮಾನಸಿಕ ತೊಂದರೆಗಳು, ರಕ್ತಹೀನತೆ ಮತ್ತು ಮುಖದ ಕಾಂತಿಯ ನಷ್ಟವಾಗಬಹುದು. ಬುಧನೊಂದಿಗೆ ಸೇರಿದಾಗ ಚರ್ಮ ವ್ಯಾಧಿಗಳು ಮತ್ತು ಮಾತಿನ ತೊದಲಿಕೆ ಇರಬಹುದು. ಗುರು, ಶುಕ್ರ, ರಾಹು ಮತ್ತು ಕೇತುಗಳೊಂದಿಗಿನ ಸಂಯೋಗಗಳು ಸಹ ಜೀರ್ಣಕ್ರಿಯೆ ಸಮಸ್ಯೆ, ಗಂಟಲು ನೋವು, ವಿಷಭಯ ಮತ್ತು ರಕ್ತದೊತ್ತಡದಂತಹ ಕಾಯಿಲೆಗಳನ್ನು ಉಂಟುಮಾಡಬಹುದು ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.
