Loading video

ದೇವರ ಮನೆಯಲ್ಲಿರೋ ಎಲ್ಲಾ ಫೋಟೋಗಳಿಗೂ ಪೂಜೆ ಮಾಡಬೇಕಾ?

|

Updated on: Apr 13, 2025 | 7:26 AM

ಈ ಒಂದು ವಿಡಿಯೋದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ದೇವರ ಮನೆಯಲ್ಲಿ ಯಾವೆಲ್ಲಾ ಫೋಟೋಗಳಿಗೆ ಪೂಜೆ ಮಾಡಬೇಕು ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಕುಲದೇವರ ಪೂಜೆಯ ಮಹತ್ವ ಮತ್ತು ಪ್ಲಾಸ್ಟಿಕ್ ಅಥವಾ ಮೇಣದ ವಿಗ್ರಹಗಳ ಬಳಕೆಯನ್ನು ತಪ್ಪಿಸುವುದು ಮುಖ್ಯ.

ಬೆಂಗಳೂರು, ಏಪ್ರಿಲ್​ 13: ಹಿಂದೂ ಧರ್ಮದ ಪ್ರಕಾರ ಅನೇಕ ಮನೆಗಳಲ್ಲಿ ವಿವಿಧ ದೇವತೆಗಳ ವಿಗ್ರಹ ಅಥವಾ ಫೋಟೋಗಳನ್ನು ಇಡುವುದು ಸಾಮಾನ್ಯ. ಆದರೆ ಎಲ್ಲಾ ದೇವತೆಗಳಿಗೂ ಪೂಜೆ ಮಾಡುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. “ಸಕಲ ದೇವ ನಮಸ್ಕಾರ ಕೇಶವಂ ಪ್ರತಿ ಗಚ್ಚತಿ” ಎಂಬ ಮಾತಿನಂತೆ, ಮಾಡುವ ಎಲ್ಲಾ ಪೂಜೆಗಳು ಭಗವಂತನನ್ನು ತಲುಪುತ್ತದೆ ಎಂದು ಹೇಳಲಾಗುತ್ತದೆ. ಆದರೆ ಪ್ರಾಯೋಗಿಕವಾಗಿ ಎಲ್ಲಾ ದೇವತೆಗಳಿಗೂ ಪ್ರತಿದಿನ ಪೂಜೆ ಮಾಡುವುದು ಕಷ್ಟ. ಈ ಸಂದಿಗ್ಧತೆಗೆ ಪರಿಹಾರವಾಗಿ, ಕುಲದೇವರಿಗೆ ಹೆಚ್ಚಿನ ಗಮನ ನೀಡುವುದು ಒಳ್ಳೆಯದು. ವಿಡಿಯೋ ನೋಡಿ.