Daily Devotional: ಪಂಚಕನ್ಯಾ ನಾಮ ಸ್ಮರಣೆಯ ರಹಸ್ಯ ಹಾಗೂ ಅದರ ಫಲ
ಅಕ್ಟೋಬರ್ 3, ಶುಕ್ರವಾರದಂದು ಪಂಚಕನ್ಯಾ ಸ್ಮರಣೆಯ ಫಲಗಳು ಮತ್ತು ರಹಸ್ಯಗಳನ್ನು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಹಿರಿಯರು, ದೇವರು, ಋಷಿಮುನಿಗಳ ಸ್ಮರಣೆಯೊಂದಿಗೆ ಪತಿವೃತಾ ಸ್ಮರಣೆ ಎಂದೂ ಕರೆಯಲ್ಪಡುವ ಪಂಚಕನ್ಯಾ ಸ್ಮರಣೆಯನ್ನು ಮಾಡುವುದರಿಂದ ಶನಿ ಕಾಟ, ಮಾಟ ಮಂತ್ರ ಇವೆಲ್ಲ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ ಎಂದು ಗುರೂಜಿ ತಿಳಿಸಿಕೊಟ್ಟಿದ್ದಾರೆ.
ಬೆಂಗಳೂರು, ಅಕ್ಟೋಬರ್ 3:ಹಿರಿಯರ ಸ್ಮರಣೆ, ದೇವರ ಸ್ಮರಣೆ, ಋಷಿಮುನಿಗಳ ಸ್ಮರಣೆಯ ಜೊತೆಗೆ ಪಂಚಕನ್ಯಾ ನಾಮ ಸ್ಮರಣೆಯೂ ಸಹ ಶ್ರೇಷ್ಠವಾದ್ದು. ಇದು ನಮ್ಮ ಕಷ್ಟಗಳಿಗೆ ತಕ್ಷಣವೇ ಪರಿಹಾರ ಒದಗಿಸುತ್ತದೆ. ಪಂಚಕನ್ಯಾ ಸ್ಮರಣೆಯನ್ನೂ ಪತಿವೃತಾ ಸ್ಮರಣೆ ಎಂದೂ ಕರೆಯುತ್ತೇವೆ. ಇದರ ಅಭ್ಯಾಸದಿಂದ ಕೆಟ್ಟ ದೃಷ್ಟಿ, ಶನಿಕಾಟದಿಂದ ಮುಕ್ತಿ ಸಿಗುತ್ತದೆ. ಈ ಸ್ಮರಣೆಯ ಮತ್ತಷ್ಟು ರಹಸ್ಯಗಳನ್ನು ಇಲ್ಲಿ ತಿಳಿಸಲಾಗಿದೆ. ವೀಡಿಯೋ ನೋಡಿ.
Published on: Oct 03, 2025 07:37 AM
