AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಮಂಗಳ ಗೌರಿ ವ್ರತದ ಮಹತ್ವ ಹಾಗೂ ಆಚರಣೆಯ ಫಲ ತಿಳಿಯಿರಿ

Daily Devotional: ಮಂಗಳ ಗೌರಿ ವ್ರತದ ಮಹತ್ವ ಹಾಗೂ ಆಚರಣೆಯ ಫಲ ತಿಳಿಯಿರಿ

ಗಂಗಾಧರ​ ಬ. ಸಾಬೋಜಿ
|

Updated on:Aug 01, 2025 | 6:58 AM

Share

ಮಂಗಳ ಗೌರಿ ವ್ರತವು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಪ್ರಮುಖ ಹಿಂದೂ ವ್ರತ. ವಿವಾಹಿತ ಮತ್ತು ಅವಿವಾಹಿತ ಮಹಿಳೆಯರು ಪತಿಯ ಆರೋಗ್ಯ, ಕುಟುಂಬದ ಒಳಿತು ಮತ್ತು ಶೀಘ್ರ ವಿವಾಹಕ್ಕಾಗಿ ಈ ವ್ರತವನ್ನು ಆಚರಿಸುತ್ತಾರೆ. ಐದು ವರ್ಷಗಳ ಕಾಲ ಈ ವ್ರತವನ್ನು ಆಚರಿಸುವುದು ವಾಡಿಕೆ. ಉಪವಾಸ, ಪೂಜೆ, ನೈವೇದ್ಯ ಮತ್ತು ಭಾಗಿಣೆಗಳ ವಿನಿಮಯ ಇದರ ಪ್ರಮುಖ ಅಂಶಗಳು.

ಬೆಂಗಳೂರು, ಆಗಸ್ಟ್​ 01: ಮಂಗಳ ಗೌರಿ ವ್ರತವು ಶ್ರಾವಣ ಮಾಸದಲ್ಲಿ, ಮುಖ್ಯವಾಗಿ ಮಂಗಳವಾರಗಳಂದು ಆಚರಿಸಲಾಗುವ ಒಂದು ಪುಣ್ಯಕರ ವ್ರತ. ಈ ವ್ರತವು ಪಾರ್ವತಿ ದೇವಿಗೆ ಸಮರ್ಪಿತವಾಗಿದ್ದು, ವಿವಾಹಿತ ಮಹಿಳೆಯರು ತಮ್ಮ ಪತಿಯ ಆರೋಗ್ಯ ಮತ್ತು ಕುಟುಂಬದ ಒಳಿತಿಗಾಗಿ, ಅವಿವಾಹಿತ ಮಹಿಳೆಯರು ಒಳ್ಳೆಯ ವರ ಮತ್ತು ಸುಖಮಯ ಜೀವನಕ್ಕಾಗಿ ಈ ವ್ರತವನ್ನು ಆಚರಿಸುತ್ತಾರೆ. ಐದು ವರ್ಷಗಳ ಕಾಲ ಈ ವ್ರತವನ್ನು ಆಚರಿಸುವುದು ವಾಡಿಕೆಯಾಗಿದ್ದು, ಪ್ರತಿ ವರ್ಷದ ಆಚರಣೆಗೆ ತನ್ನದೇ ಆದ ವಿಶೇಷತೆಗಳಿವೆ. ಪ್ರಥಮ ವರ್ಷ ತವರು ಮನೆಯಲ್ಲಿ ಮತ್ತು ಉಳಿದ ನಾಲ್ಕು ವರ್ಷಗಳು ಪತಿಯ ಮನೆಯಲ್ಲಿ ವ್ರತವನ್ನು ಆಚರಿಸಲಾಗುತ್ತದೆ.

Published on: Aug 01, 2025 06:58 AM