Video: ಆಂಧ್ರದ ದೇವಸ್ಥಾನದಲ್ಲಿ ಪೊಲೀಸರ ಮೇಲೆ ಆಂಧ್ರ ಸಚಿವರ ಸಹೋದರನಿಂದ ಹಲ್ಲೆ
ಆಂಧ್ರಪ್ರದೇಶದ ಸಚಿವ ಬಿಸಿ ಜನಾರ್ದನ ರೆಡ್ಡಿ ಸಹೋದರ ಮದನ್ ಗೋಪಾಲ್ ರೆಡ್ಡಿ ದೇವಸ್ಥಾನದಲ್ಲಿ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಕರ್ನೂಲಿನಲ್ಲಿ ನಡೆದಿದೆ. ಕರ್ನೂಲು ಜಿಲ್ಲೆಯ ಕೋಳಿಮಿಗುಂಡ್ಲಾದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಕಾನ್‌ಸ್ಟೆಬಲ್ ಒಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿರೋಧ ಪಕ್ಷವಾದ ವೈಎಸ್‌ಆರ್‌ಸಿಪಿಯಿಂದ ಟೀಕೆ ವ್ಯಕ್ತವಾಗಿದೆ.
ಆಂಧ್ರಪ್ರದೇಶ, ಆಗಸ್ಟ್ 01: ಆಂಧ್ರಪ್ರದೇಶದ ಸಚಿವ ಬಿಸಿ ಜನಾರ್ದನ ರೆಡ್ಡಿ ಸಹೋದರ ಮದನ್ ಗೋಪಾಲ್ ರೆಡ್ಡಿ ದೇವಸ್ಥಾನದಲ್ಲಿ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಕರ್ನೂಲಿನಲ್ಲಿ ನಡೆದಿದೆ. ಕರ್ನೂಲು ಜಿಲ್ಲೆಯ ಕೋಳಿಮಿಗುಂಡ್ಲಾದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಕಾನ್‌ಸ್ಟೆಬಲ್ ಒಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿರೋಧ ಪಕ್ಷವಾದ ವೈಎಸ್‌ಆರ್‌ಸಿಪಿಯಿಂದ ಟೀಕೆ ವ್ಯಕ್ತವಾಗಿದೆ.
ಟಿಡಿಪಿ ನಾಯಕರು ಮತ್ತು ಅವರ ಕುಟುಂಬ ಸದಸ್ಯರು ದುರಹಂಕಾರ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದೆ. ಬುಧವಾರ ದೇವಾಲಯದ ಉದ್ಘಾಟನೆ ವೇಳೆ ಈ ಹಲ್ಲೆ ಘಟನೆ ನಡೆದಿದ್ದು, ಆ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಹಾಜರಿದ್ದರು. ಟಿಡಿಪಿ ನಾಯಕನ ಸಹೋದರ ದೇವಸ್ಥಾನಕ್ಕೆ ತಕ್ಷಣ ಪ್ರವೇಶಿಸುವಂತೆ ಒತ್ತಾಯಿಸಿದ ಮತ್ತು ಜನಸಂದಣಿಯನ್ನು ನಿರ್ವಹಿಸಲು ಕರ್ತವ್ಯದಲ್ಲಿದ್ದ ಜಶ್ವಂತ್ ಎಂದು ಗುರುತಿಸಲಾದ ಕಾನ್‌ಸ್ಟೆಬಲ್ ಜೊತೆ ತೀವ್ರ ವಾಗ್ವಾದ ನಡೆಸಿದರು ಎಂದು ಆರೋಪಿಸಲಾಗಿದೆ.
ಪೊಲೀಸ್ ಆತನ ಕೋರಿಕೆಯನ್ನು ನಿರಾಕರಿಸಿದಾಗ, ಮದನ್ ಆತನನ್ನು ಮಾತಿನಿಂದ ನಿಂದಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ, ಆದರೆ ಪೊಲೀಸರು ಕೂಡ ತಿರುಗಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಟಿಡಿಪಿ ಸಚಿವರು ದಾಳಿಯನ್ನು ಖಂಡಿಸಿದ್ದಾರೆ. ಅವರು ತಮ್ಮ ಸಹೋದರನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

