ಹದಿಮೂರು ವರ್ಷದ ಬಾಲಕನನ್ನು ಹತೈಗಿದ್ದಿದ್ದು ಅಕ್ಷಮ್ಯ, ಗುಂಡೇಟು ತಿಂದು ಆಸ್ಪತ್ರೆ ಸೇರಿದ ಆರೋಪಿಗಳು
ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟ್ಯೂಷನ್ ಗೆ ಅಂತ ತೆರಳಿದ್ದ ಬಾಲಕ ನಿಶ್ಚಿತ್ನ ಅಪಹರಣವಾಗಿತ್ತು. ಅರೋಪಿಗಳು ನಿಶ್ಚಿತ್ ಪೋಷಕರಿಗೆ ₹5 ಲಕ್ಷಗಳ ರ್ಯಾನ್ಸಮ್ಗಾಗಿ ಬೇಡಿಕೆ ಇಟ್ಟಿದ್ದರು. ಪೋಷಕರು ಪೊಲೀಸರಿಗೆ ದೂರು ಸಲ್ಲಿಸಿದ ಕಾರಣ ಗುರುಮೂರ್ತಿ ಮತ್ತು ಗೋಪಾಲಕೃಷ್ಣ ಬಾಲಕನನ್ನು ಕೊಂದಿದ್ದು ನಿಶ್ಚಿತ್ ಶವ ನಿನ್ನೆ ಬನ್ನೇರುಘಟ್ಟದ ಅರಣ್ಯಪ್ರದೇಶದಲ್ಲಿ ಪತ್ತೆಯಾಗಿತ್ತ್ತು.
ಬೆಂಗಳೂರು, ಆಗಸ್ಟ್ 1: ಹದಿಮೂರು ವರ್ಷದ ಬಾಲಕನನ್ನು ಗುರುಮೂರ್ತಿ (Gurumurthy) ಮತ್ತು ಗೋಪಾಲಕೃಷ್ಣ (Gopalakrishna) ಹೆಸರಿನ ದುಷ್ಟರು ಅಪಹರಿಸಿ, ಕೊಂದು, ಬನ್ನೇರುಘಟ್ಟದ ಪೊಲೀಸರು ಬೆನ್ನಟ್ಟಿದ್ದಾಗ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದು, ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು ಮತ್ತು ಅವರು ಕಾಲಿಗೆ ಗುಂಡು ಹಾರಿಸಿದಾಗ ಪೆಟ್ಟು ತಿಂದು ತೀವ್ರವಾಗಿ ಗಾಯಗೊಂಡಿದ್ದು ಇದೇ ಜಾಗ. ಆರೋಪಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನಮ್ಮ ವರದಿಗಾರ ಹೇಳುತ್ತಾರೆ. ಸ್ಥಳದಲ್ಲಿ ದುಷ್ಟರು ಬಳಸಿದ ದ್ವಿಚಕ್ರವಾಹನ ಮತ್ತು ಹರಿತವಾದ ಆಯುಧಗಳನ್ನು ನೋಡಬಹುದು. ಆರೋಪಿಗಳು ಹಲ್ಲೆಗೆ ಮುಂದಾಗಿದ್ದ ಕಾರಣ ಆತ್ಮರಕ್ಷಣೆಗಾಗಿ ಹುಳಿಮಾವು ಪೊಲೀಸ್ ಠಾಣೆಯ ಪಿಎಸ್ಐ ಕುಮಾರಸ್ವಾಮಿ ಮತ್ತು ಎಸ್ಐ ಅರವಿಂದ್ ಕುಮಾರ್ ಗುಂಡು ಹಾರಿಸಿದರೆಂದು ನಮ್ಮ ವರದಿಗಾರ ಹೇಳುತ್ತಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ಶೂಟೌಟ್: ಕೇರಳ ಉದ್ಯಮಿಯ ದರೋಡೆ ಮಾಡಿದ್ದ ಆರೋಪಿ ಕಾಲಿಗೆ ಗುಂಡೇಟು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ

