Daily Devotional: ಮಲಗುವ ಮೊದಲು ಕಾಲು ತೊಳೆಯುವುದರ ಪ್ರಯೋಜನ ಏನು? ವಿಡಿಯೋ ನೋಡಿ

|

Updated on: May 01, 2024 | 6:55 AM

ಮಲಗುವ ಮೊದಲು ಪ್ರತಿದಿನ ಮಾಡಬೇಕಾದ ಪ್ರಮುಖ ಅಭ್ಯಾಸವೆಂದರೆ ನಮ್ಮ ಪಾದಗಳನ್ನು ತೊಳೆಯುವುದು. ಪಾದಗಳು ನಮ್ಮ ಇಡೀ ದೇಹದ ಭಾರವನ್ನು ಹೊರುತ್ತವೆ. ಹಾಗಾಗಿ ಅವುಗಳ ಕಾಳಜಿವಹಿಸುವುದೂ ಕೂಡಾ ಮುಖ್ಯ. ಹೀಗಾಗಿ ಮಲಗುವ ಮುನ್ನ ಪಾದ ಏಕೆ ತೊಳೆಯಬೇಕು? ವಿಡಿಯೋ ನೋಡಿ..

ಅನೇಕ ಜನರು ಮಲಗುವ ಮುನ್ನ ತಮ್ಮ ಮುಖ ಮತ್ತು ಕೈಗಳನ್ನು ತೊಳೆಯುತ್ತಾರೆ. ಇದನ್ನು ಮಾಡುವುದರಿಂದ ಸಾಕಷ್ಟು ವಿಶ್ರಾಂತಿಯನ್ನು ನೀಡುತ್ತದೆ ಮತ್ತು ನಿಮ್ಮ ಹಾಸಿಗೆಯು ಸೂಕ್ಷ್ಮಜೀವಿಗಳ ಸಂತಾನೋತ್ಪತ್ತಿಯ ಸ್ಥಳವಾಗುವುದನ್ನು ರಕ್ಷಿಸುತ್ತದೆ. ಆದಾಗ್ಯೂ, ಮಲಗುವ ಮೊದಲು ಪ್ರತಿದಿನ ಮಾಡಬೇಕಾದ ಪ್ರಮುಖ ಅಭ್ಯಾಸವೆಂದರೆ ನಮ್ಮ ಪಾದಗಳನ್ನು ತೊಳೆಯುವುದು. ಪಾದಗಳು ನಮ್ಮ ಇಡೀ ದೇಹದ ಭಾರವನ್ನು ಹೊರುತ್ತವೆ. ಹಾಗಾಗಿ ಅವುಗಳ ಕಾಳಜಿವಹಿಸುವುದೂ ಕೂಡಾ ಮುಖ್ಯ. ಪಾದಗಳು ಸದಾ ನೆಲದ ಮೇಲೆ ಅಥವಾ ಬೂಟ್‌ ಧರಿಸಿ ಇರುತ್ತವೆ. ಆದ್ದರಿಂದ ಪಾದಗಳ ಅಡಿಭಾಗವು ಎಂದಿಗೂ ಆರಾಮದಾಯಕವಾಗುವುದಿಲ್ಲ. ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳೂ ಪಾದದಲ್ಲಿ ಸೇರಿಕೊಳ್ಳುತ್ತವೆ. ಆದ್ದರಿಂದ ರಾತ್ರಿ ಮಲಗುವ ಮುನ್ನ ನಿಮ್ಮ ಪಾದಗಳನ್ನು ಚೆನ್ನಾಗಿ ತೊಳೆಯುವುದು ಪಾದದ ಅಡಿಭಾಗದಲ್ಲಿರುವ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

Follow us on