AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಒಳ್ಳೆಯ ಅಂತರದಲ್ಲಿ ಗೀತಾ ಶಿವರಾಜ್​ಕುಮಾರ್​ ಗೆಲ್ಲುತ್ತಾರೆ’: ಭವಿಷ್ಯ ನುಡಿದ ಎಸ್​. ನಾರಾಯಣ್​

‘ಒಳ್ಳೆಯ ಅಂತರದಲ್ಲಿ ಗೀತಾ ಶಿವರಾಜ್​ಕುಮಾರ್​ ಗೆಲ್ಲುತ್ತಾರೆ’: ಭವಿಷ್ಯ ನುಡಿದ ಎಸ್​. ನಾರಾಯಣ್​

ಮದನ್​ ಕುಮಾರ್​
|

Updated on: Apr 30, 2024 | 8:40 PM

Share

‘ಶಿವಮೊಗ್ಗದಲ್ಲಿ ಗೀತಾ ಶಿವರಾಜ್​ಕುಮಾರ್​ ಅವರು ದೊಡ್ಡ ಬಹುಮತ ಪಡೆದು ಗೆಲ್ಲುತ್ತಾರೆ. ಅದು ಖಂಡಿತಾ’ ಎಂದು ನಿರ್ದೇಶಕ ಎಸ್​. ನಾರಾಯಣ್​ ಹೇಳಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿಗಳ ಪರವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅವರು ಪ್ರಚಾರ ಮಾಡುತ್ತಿದ್ದಾರೆ. ಚಿತ್ರರಂಗದ ಅನೇಕರು ಗೀತಾ ಶಿವರಾಜ್​ಕುಮಾರ್​ ಅವರಿಗೆ ಬೆಂಬಲ ನೀಡಿದ್ದಾರೆ. ಮೇ 7ರಂದು ಕರ್ನಾಟಕದಲ್ಲಿ 2ನೇ ಹಂತದ ಮತದಾನ ನಡೆಯಲಿದೆ.

ನಟ, ನಿರ್ದೇಶಕ ಎಸ್​. ನಾರಾಯಣ್​ ಅವರು ಕಾಂಗ್ರೆಸ್​ (Congress) ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ವಿವಿಧ ಲೋಕಸಭಾ ಕ್ಷೇತ್ರಗಳಿಗೆ ಹೋಗಿ ಅವರು ಕಾಂಗ್ರೆಸ್​ ಅಭ್ಯರ್ಥಿಗಳಿಗೆ ಬೆಂಬಲ ನೀಡಿದ್ದಾರೆ. ಇಂದು (ಏಪ್ರಿಲ್​ 30) ಅವರು ಬಾಗಲಕೋಟೆಯಲ್ಲಿ ಪ್ರಚಾರ ಮಾಡಿದ್ದಾರೆ. ಈ ವೇಳೆ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಆಗ ಅವರಿಗೆ ಶಿವಮೊಗ್ಗದ ಕಾಂಗ್ರೆಸ್​ ಅಭ್ಯರ್ಥಿ ಗೀತಾ ಶಿವರಾಜ್​ಕುಮಾರ್ (Geetha Shivarajkumar)​ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಶಿವಮೊಗ್ಗದ ಲೋಕಸಭಾ ಚುನಾವಣೆಯಲ್ಲಿ ಗೀತಾ ಶಿವರಾಜ್​ಕುಮಾರ್​ ಗೆದ್ದೇ ಗೆಲ್ಲುತ್ತಾರೆ ಎಂದು ಎಸ್​​. ನಾರಾಯಣ್​ (S Narayan) ಭವಿಷ್ಯ ನುಡಿದಿದ್ದಾರೆ. ‘ಗೀತಾ ಶಿವರಾಜ್​ಕುಮಾರ್​ ಅವರು ಈ ಬಾರಿ ಶಿವಮೊಗ್ಗದಲ್ಲಿ ಗೆಲ್ಲುತ್ತಾರೆ. ಕಾರಣ ನಿಮಗೂ ಗೊತ್ತಿದೆ. ಒಳ್ಳೆಯ ಅಂತರದಲ್ಲೇ ಗೆಲ್ಲುತ್ತಾರೆ. ಆ ಕ್ಷೇತ್ರದಲ್ಲಿ ಇಬ್ಬರು ಪ್ರಭಾವಿಗಳ ನಡುವೆ ಘರ್ಷಣೆ ಇದೆ. ಅದು ಗೀತಾಗೆ ಅನುಕೂಲ ಆಗತ್ತೆ. ಈ ಹಿಂದೆ ಗೀತಾ ಅವರು ಅಲ್ಲಿ ಸೋಲು ಕಂಡಿದ್ದರು. ಆ ಸೋಲಿನ ಅನುಕಂಪ ಹೆಣ್ಣುಮಕ್ಕಳಿಗೆ ಇದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಹೆಣ್ಮಕ್ಕಳು ಕಾಂಗ್ರೆಸ್​ ಅಲ್ಲದೇ ಬೇರೆ ಯಾವುದೇ ಪಕ್ಷಕ್ಕೆ ಮತ ಹಾಕಬಾರದು ಅಂತ ನಿರ್ಧರಿಸಿದ್ದಾರೆ. ಬಂಗಾರಪ್ಪನವರು ಆ ಜಿಲ್ಲೆಗೆ ಬಹಳ ಕೊಡುಗೆ ನೀಡಿದ್ದಾರೆ. ನಾನು ಕೂಡ ಅದೇ ಜಿಲ್ಲೆಯ ಭದ್ರಾವತಿಯವನು. ಹಾಗಾಗಿ ನನಗೆ ಗೊತ್ತಿದೆ. ಅಲ್ಲಿ ಕಾಂಗ್ರೆಸ್​ ಗೆಲ್ಲುತ್ತದೆ’ ಎಂದು ಎಸ್​. ನಾರಾಯಣ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More