ಪ್ರಜ್ವಲ್ ರೇವಣ್ಣ ಬಗ್ಗೆ ಪ್ರಶ್ನೆ ಕೇಳಿದಾಗ ಡಾ ಸಿಎನ್ ಮಂಜುನಾಥ್ ಪ್ರತಿಕ್ರಿಯಿಸಲು ನಿರಾಕರಿಸಿದರು!

ಪ್ರಜ್ವಲ್ ರೇವಣ್ಣ ಬಗ್ಗೆ ಪ್ರಶ್ನೆ ಕೇಳಿದಾಗ ಡಾ ಸಿಎನ್ ಮಂಜುನಾಥ್ ಪ್ರತಿಕ್ರಿಯಿಸಲು ನಿರಾಕರಿಸಿದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 30, 2024 | 6:54 PM

ನೂರಾರು ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸಿರುವ ಅರೋಪ ಹೊತ್ತು ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್ ರೇವಣ್ಣ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ. ಸಂಬಂಧದಲ್ಲಿ ಪ್ರಜ್ವಲ್, ಡಾ ಮಂಜುನಾಥ್ ಅವರಿಗೆ ಅಳಿಯನಾಗಬೇಕು. ಈ ವಿಷಯದ ಬಗ್ಗೆ ಮಾತಾಡಲ್ಲ ಎಂದು ಅವರು ಸರಸರ ನಡೆದುಹೋದರು.

ರಾಮನಗರ: ನಗರದಲ್ಲಿಂದು ಸ್ಟ್ರಾಂಗ್ ರೂಮ್ ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಬೆಂಗಳೂ\ರು ಗ್ರಾಮಾತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ (Dr CN Manjunath) ಮತ್ತೊಮ್ಮೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಮತದಾನ ಪ್ರಮಾಣದ (voting percentage) ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿ ಅವರು, ನಗರ ಪ್ರದೇಶಗಳಲ್ಲಿ ಕಳೆದ ಬಾರಿಯ ಲೋಕಸಭಾ ಚುನಾವಣೆಗಿಂತ (Lok Sabha polls) ಈ ಬಾರಿ ಎರಡೂವರೆ ಪರ್ಸೆಂಟ್ ನಷ್ಟು ಹೆಚ್ಚು ಮತದಾನವಾಗಿರುವುದು ಸಂತೋಷದ ವಿಚಾರ, ಮತದಾನವನ್ನು ವೀಕೆಂಡ್ ಗಳಲ್ಲಿ ಅಯೋಜಿಸುವ ಬದಲು ವೀಕ್ ಡೇಸ್ ಗಳಲ್ಲಿ ಅಂದರೆ ಸೋಮವಾರ, ಮಂಗಳವಾರ ಅಥವಾ ಬುಧವಾರದಂದು ನಡೆಸಿದರೆ ಇನ್ನೂ ಮೂರು ಪರ್ಸೆಂಟ್ ನಷ್ಟು ಹೆಚ್ಚು ವೋಟಿಂಗ್ ಆಗುವ ಸಾಧ್ಯತೆ ಇದೆ ಎಂದು ಹೇಳಿದ ಡಾ ಮಂಜುನಾಥ್ ಇದರ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಗಂಭೀರವಾಗಿ ಯೋಚಿಸಬೇಕು ಎಂದರು. ನೂರಾರು ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸಿರುವ ಅರೋಪ ಹೊತ್ತು ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್ ರೇವಣ್ಣ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ. ಸಂಬಂಧದಲ್ಲಿ ಪ್ರಜ್ವಲ್, ಡಾ ಮಂಜುನಾಥ್ ಅವರಿಗೆ ಅಳಿಯನಾಗಬೇಕು. ಈ ವಿಷಯದ ಬಗ್ಗೆ ಮಾತಾಡಲ್ಲ ಎಂದು ಅವರು ಸರಸರ ನಡೆದುಹೋದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಧರ್ಮ-ಅಧರ್ಮಗಳ ವ್ಯಾಖ್ಯಾನ ಮಾಡಲಾರೆ, ಚುನಾವಣೆಯಲ್ಲಿ ಸ್ಪರ್ಧೆ ಆರೋಗ್ಯಕರವಾಗಿರಬೇಕು: ಡಾ ಸಿಎನ್ ಮಂಜುನಾಥ್