Daily Devotional: ಹನುಮಂತನಿಗೆ ಯಾವ ರೀತಿಯ ಹಾರ ಹಾಕಿದರೆ ಏನು ಫಲ?
ಹನುಮನ ಆರಾಧನೆಯಲ್ಲಿ ವಿವಿಧ ರೀತಿಯ ಹಾರಗಳ ಅರ್ಪಣೆಗೆ ವಿಶೇಷ ಮಹತ್ವವಿದೆ. ಒಡೆ ಹಾರ, ವೀಳ್ಯದೇಲೆ ಹಾರ, ಹಣ್ಣಿನ ಹಾರ, ಮತ್ತು ಡ್ರೈ ಫ್ರೂಟ್ಸ್ ಹಾರಗಳನ್ನು ಅರ್ಪಿಸುವುದರಿಂದ ವಿವಿಧ ಫಲಗಳು ದೊರೆಯುತ್ತವೆ. ಒಡೆ ಹಾರ ಆರೋಗ್ಯ ವೃದ್ಧಿಗೆ ಮತ್ತು ಸಾಲದಿಂದ ಮುಕ್ತಿಗೆ ಸಹಾಯಕವಾಗಿದೆ.
ಬೆಂಗಳೂರು, ಮೇ 12: ಹನುಮಂತನಿಗೆ ಯಾವ ರೀತಿಯ ಹಾರಗಳನ್ನು ಅರ್ಪಿಸಬೇಕು ಎಂಬುವುದನ್ನು ಗುರೂಜಿ ವಿಡಿಯೋದಲ್ಲಿ ತಿಳಿಸಿದ್ದಾರೆ. ಹನುಮನ ಆರಾಧನೆಯಲ್ಲಿ ಹಾರಗಳಿಗೆ ವಿಶೇಷ ಸ್ಥಾನವಿದೆ. ಒಡೆ ಹಾರವು ಹನುಮನಿಗೆ ಅತ್ಯಂತ ಪ್ರಿಯವಾದ ಹಾರ. ಇದನ್ನು ಅರ್ಪಿಸುವುದರಿಂದ ಆರೋಗ್ಯ ವೃದ್ಧಿ, ಕಷ್ಟನಿವಾರಣೆ ಮತ್ತು ಸಾಲದಿಂದ ಮುಕ್ತಿ ದೊರೆಯುತ್ತದೆ ಎಂದು ನಂಬಲಾಗುತ್ತದೆ. ವೀಳ್ಯದೇಲೆ ಹಾರವನ್ನು ಅರಿಶಿನ ಅಕ್ಷತೆಗಳೊಂದಿಗೆ ಅರ್ಪಿಸುವುದರಿಂದ ಕಂಟಕಗಳಿಂದ ಮುಕ್ತಿ ದೊರೆಯುತ್ತದೆ. ಹಣ್ಣುಗಳು, ತರಕಾರಿಗಳು, ಮತ್ತು ಡ್ರೈ ಫ್ರೂಟ್ಸ್‌ಗಳ ಹಾರಗಳನ್ನು ಅರ್ಪಿಸುವುದರಿಂದಲೂ ವಿವಿಧ ಫಲಗಳು ದೊರೆಯುತ್ತವೆ.