Daily Devotional: ವೈಕುಂಠ ಏಕಾದಶಿಯ ಫಲ ಹಾಗೂ ಮಹತ್ವ?

Updated on: Dec 30, 2025 | 7:16 AM

ಹಿಂದೂ ಧರ್ಮದಲ್ಲಿ ವೈಕುಂಠ ಏಕಾದಶಿಯು ವರ್ಷದ 24 ಏಕಾದಶಿಗಳಲ್ಲಿ ಅತ್ಯಂತ ವಿಶಿಷ್ಟ ಮತ್ತು ಪವಿತ್ರ ದಿನವಾಗಿದೆ. ಇದನ್ನು ಮುಕ್ಕೋಟಿ ಏಕಾದಶಿ ಎಂದೂ ಕರೆಯಲಾಗುತ್ತದೆ. ಈ ದಿನ ಸಾಕ್ಷಾತ್ ಶ್ರೀಮನ್ನಾರಾಯಣ ಅಥವಾ ವಿಷ್ಣುವನ್ನು ಉತ್ತರ ದ್ವಾರದ ಮೂಲಕ ದರ್ಶನ ಮಾಡುವ ಸಂಪ್ರದಾಯವಿದೆ. ಶಾಸ್ತ್ರಗಳ ಪ್ರಕಾರ, ಈ ದಿನ 33 ಕೋಟಿ ದೇವತೆಗಳು ವಿಷ್ಣುವನ್ನು ದರ್ಶನ ಮಾಡಲು ಆಗಮಿಸುತ್ತಾರೆ. ಹೀಗಾಗಿ, ಈ ದಿನ ವಿಷ್ಣುವನ್ನು ದರ್ಶಿಸುವುದರಿಂದ 33 ಕೋಟಿ ದೇವತೆಗಳ ಅನುಗ್ರಹಕ್ಕೂ ಪಾತ್ರರಾಗುವ ಸೌಭಾಗ್ಯ ದೊರೆಯುತ್ತದೆ.

ಬೆಂಗಳೂರು, ಡಿಸೆಂಬರ್ 30: ಹಿಂದೂ ಧರ್ಮದಲ್ಲಿ ವೈಕುಂಠ ಏಕಾದಶಿಯು ವರ್ಷದ 24 ಏಕಾದಶಿಗಳಲ್ಲಿ ಅತ್ಯಂತ ವಿಶಿಷ್ಟ ಮತ್ತು ಪವಿತ್ರ ದಿನವಾಗಿದೆ. ಇದನ್ನು ಮುಕ್ಕೋಟಿ ಏಕಾದಶಿ ಎಂದೂ ಕರೆಯಲಾಗುತ್ತದೆ. ಈ ದಿನ ಸಾಕ್ಷಾತ್ ಶ್ರೀಮನ್ನಾರಾಯಣ ಅಥವಾ ವಿಷ್ಣುವನ್ನು ಉತ್ತರ ದ್ವಾರದ ಮೂಲಕ ದರ್ಶನ ಮಾಡುವ ಸಂಪ್ರದಾಯವಿದೆ. ಶಾಸ್ತ್ರಗಳ ಪ್ರಕಾರ, ಈ ದಿನ 33 ಕೋಟಿ ದೇವತೆಗಳು ವಿಷ್ಣುವನ್ನು ದರ್ಶನ ಮಾಡಲು ಆಗಮಿಸುತ್ತಾರೆ. ಹೀಗಾಗಿ, ಈ ದಿನ ವಿಷ್ಣುವನ್ನು ದರ್ಶಿಸುವುದರಿಂದ 33 ಕೋಟಿ ದೇವತೆಗಳ ಅನುಗ್ರಹಕ್ಕೂ ಪಾತ್ರರಾಗುವ ಸೌಭಾಗ್ಯ ದೊರೆಯುತ್ತದೆ.

ವೈಕುಂಠ ಏಕಾದಶಿಯಂದು ಉಪವಾಸ ವ್ರತಕ್ಕೆ ವಿಶೇಷ ಪ್ರಾಶಸ್ತ್ಯವಿದೆ. ಈ ದಿನ ರಜೋ ಆಹಾರ ಮತ್ತು ತಮೋ ಆಹಾರವನ್ನು ತ್ಯಜಿಸಿ, ಸಾತ್ವಿಕ ಆಹಾರವನ್ನು ಸೇವಿಸಬೇಕು ಅಥವಾ ಸಂಪೂರ್ಣ ಉಪವಾಸ ಆಚರಿಸಬೇಕು. ರೋಗಿಗಳು, ವೃದ್ಧರು ಮತ್ತು ಅಶಕ್ತರು ಅವಲಕ್ಕಿ ಪದಾರ್ಥಗಳನ್ನು ಸೇವಿಸಬಹುದು. ಈ ದಿನ ವಿಷ್ಣು ಸಹಸ್ರನಾಮ, ಶ್ರೀಮನ್ನಾರಾಯಣ ಅಷ್ಟೋತ್ತರಗಳನ್ನು ಪಠಿಸುವುದು ಶ್ರೇಷ್ಠ. ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ ಮಾಡಿ, ದೀಪಾರಾಧನೆ ಮಾಡಿ, ಓಂ ನಮೋ ನಾರಾಯಣಾಯ ಮಂತ್ರವನ್ನು ಜಪಿಸುವುದರಿಂದ ದೈವಾನುಗ್ರಹ ಲಭಿಸುತ್ತದೆ. ಈ ಆಚರಣೆಗಳಿಂದ ಪುನರ್ಜನ್ಮದ ಬಂಧನದಿಂದ ಮುಕ್ತಿ, ಪಾಪಗಳ ನಿವಾರಣೆ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.