ಬೆಂಗಳೂರು: ಪಿಜಿಯಲ್ಲಿ ಸಿಲಿಂಡರ್ ಸ್ಫೋಟ, ನಿಜಕ್ಕೂ ಆಗಿದ್ದೇನು? ಪಿಜಿಯಲ್ಲಿ ಇದ್ದವರು ಹೇಳೋದೇನು ನೋಡಿ
ಬೆಂಗಳೂರಿನ ಕುಂದಲಹಳ್ಳಿ ಕಾಲೋನಿಯ ಪಿಜಿಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 23 ವರ್ಷದ ಅರವಿಂದ್ ಸಾವನ್ನಪ್ಪಿದ್ದಾರೆ. ದೇವಿ, ವಿಶಾಲ್ ಮತ್ತು ವೆಂಕಟೇಶ್ ಗಾಯಗೊಂಡಿದ್ದು, ಮೂವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅನಿಲ ಸೋರಿಕೆಯೇ ಸ್ಫೋಟಕ್ಕೆ ಕಾರಣವೆಂದು ಪೊಲೀಸರು ಶಂಕಿಸಿದ್ದಾರೆ. 40-50 ಪಿಜಿ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.
ಬೆಂಗಳೂರು, ಡಿಸೆಂಬರ್ 30: ಬೆಂಗಳೂರಿನ ಕುಂದಲಹಳ್ಳಿ ಕಾಲೋನಿಯ ಪಿಜಿಯೊಂದರಲ್ಲಿ ಸೋಮವಾರ ಸಿಲಿಂಡರ್ ಸ್ಫೋಟಗೊಂಡು ಅರವಿಂದ್ (23) ಎಂಬ ಯುವಕ ಮೃತಪಟ್ಟಿದ್ದಾರೆ. ಹೆಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ದುರ್ಘಟನೆಯಲ್ಲಿ ಮೂರು ಮಂದಿ ಗಾಯಗೊಂಡಿದ್ದಾರೆ. ಘಟನೆ ಬಗ್ಗೆ ಪಿಜಿಯಲ್ಲಿ ವಾಸವಿದ್ದವರೊಬ್ಬರು ‘ಟಿವಿ9’ಗೆ ಪ್ರತಿಕ್ರಿಯಿಸಿದ್ದು, ಘಟನೆಗೆ ಅನಿಲ ಸೋರಿಕೆಯೇ ಕಾರಣವೆಂದು ಶಂಕಿಸಲಾಗಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದಾಗ ಸ್ಥಳಕ್ಕೆ ಬಂದಿದ್ದ ನಿವಾಸಿಗಳು ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ್ದಾರೆ. ಸಿಲಿಂಡರ್ ಸ್ಫೋಟದ ಪರಿಣಾಮವಾಗಿ ಕಟ್ಟಡದಲ್ಲಿ ವಿದ್ಯುತ್ ಸರಬರಾಜು ಕಡಿತಗೊಂಡಿದೆ. ಸುಮಾರು 40-50 ಪಿಜಿ ನಿವಾಸಿಗಳನ್ನು ಸ್ಥಳಾಂತರಿಸಲಾಗಿದ್ದು, ಅವರಿಗೆ ತಾತ್ಕಾಲಿಕವಾಗಿ ಬೇರೆಡೆ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Follow Us
Latest Videos
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
‘ಪೆದ್ದಿ’ ಡಬ್ಬಿಂಗ್ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
ಸ್ವಿಮ್ಮಿಂಗ್ ಪೂಲ್ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ

