Daily Horoscope: ಕುಂಭ ಸಂಯೋಗ ರಾಶಿಫಲ; ಆರ್ಥಿಕ ಲಾಭವಾಗಲಿದೆ

|

Updated on: May 15, 2024 | 10:18 AM

ಜ್ಯೋತಿಷ್ಯದ ಪ್ರಕಾರ, ನಮ್ಮ ದೈನಂದಿನ ಜೀವನವು ಗ್ರಹಗಳ ಚಲನ-ವಲನಗಳಿಂದ ಪ್ರಭಾವಿತವಾಗಿದೆ. ಇಂದಿನ (ಮೇ 15) ರ ಗ್ರಹಗಳ ಚಲನವಲನ ಹೇಗಿದೆ? ಕುಂಭ ರಾಶಿ ಭವಿಷ್ಯವೇನು? ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಆಶ್ಲೇಷ, ಯೋಗ: ಗಂಡ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 52 ನಿಮಿಷಕ್ಕೆ, ರಾಹು ಕಾಲ 12:29 ರಿಂದ 14:05ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:42 ರಿಂದ 09:18ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:29ರ ವರೆಗೆ.

ಕುಂಭ ರಾಶಿಯವರಿಗೆ ಅಂಗಾರಕ ಯೋಗವಿದೆ. ಎರಡನೇ ಮನೆಯಲ್ಲಿ ಅಂಗಾರಕ ಯೋಗ ಏರ್ಪಡುತ್ತಿದೆ. 5,8,9 ದೃಷ್ಟಿಯಲ್ಲಿರುವವರಿಗೆ ಇಂದು ವಿಪರೀತವಾಗಿ ಕೋಪ ಮಾಡಿಕೊಳ್ಳುತ್ತಾರೆ. ಇದರಿಂದ ಕಲಹಗಳು ಆಗುವ ಸಾಧ್ಯತೆ ಇದೆ. ಹಣದ ವಿಷಯದಲ್ಲಿ ಯೋಗವಿದೆ. ಕುಟುಂಬ ಚೆನ್ನಾಗಿರುತ್ತದೆ. ಔಷಧಿಗಳಿಗಾಗಿ ಖರ್ಚು ಮಾಡುವಿರಿ. ಮಕ್ಕಳ ವಿಚಾರದಲ್ಲಿ ಜಾಗೃತೆ ಇರಬೇಕು. ಕುಂಭ ರಾಶಿಯ ಹೆಣ್ಣುಮಕ್ಕಳು ಜಾಗೃತವಾಗಿರಬೇಕು. ಹೊಸ ಹೂಡಿಕೆ ಬೇಡ. ವ್ಯಾಪಾರದಲ್ಲಿ ಶುಭವಾಗುತ್ತದೆ.