ದಿನ ಭವಿಷ್ಯ: ದಿನದ ಪಂಚಾಂಗ ಮತ್ತು ಸಂಕಷ್ಟಿ ಚತುರ್ಥಿಯ ಮಹತ್ವ
Daily Horoscope 5 February: ಡಾ. ಬಸವರಾಜ ಗುರೂಜಿ ಅವರು ದಿನಾಂಕ 05-02-2026, ಗುರುವಾರದ ಪಂಚಾಂಗ ವಿವರಗಳನ್ನು ನೀಡಿದ್ದಾರೆ. ಈ ದಿನ ರಾಹುಕಾಲ, ಶುಭಕಾಲ ಮತ್ತು ಸಂಕಷ್ಟಿ ಚತುರ್ಥಿಯ ಮಹತ್ವವನ್ನು ವಿವರಿಸಿದ್ದಾರೆ. ವಿನಾಯಕನ ಆರಾಧನೆಯಿಂದ ಸಂಕಲ್ಪಗಳು ಈಡೇರುತ್ತವೆ ಎಂದು ತಿಳಿಸಲಾಗಿದೆ. ಇಂದು 12 ರಾಶೀಗಳು ಫಲ ಹೇಗಿದೆ ? ಯಾವೆಲ್ಲ ರಾಶಿಗಳಿಗೆ ಒಳಿತು ಆಗಲಿದೆ ಎಂಬುದನ್ನು ತಿಳಿಸಿದ್ದಾರೆ.
ಇಂದಿನ ದಿನಾಂಕ 05-02-2026 ಗುರುವಾರವಾಗಿದ್ದು, ಇಂದಿನ ದಿನಭವಿಷ್ಯ ಹೇಗಿದೆ ಎಂಬುದನ್ನು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ. ಇದು ವಿಶ್ವಾ ವಸುನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಕೃಷ್ಣಪಕ್ಷ, ಚತುರ್ಥಿ, ಉತ್ತರಾ ನಕ್ಷತ್ರ, ಸುಕರ್ಮ ಯೋಗ ಮತ್ತು ಬವಕರಣ ಇರುವ ದಿನ. ಈ ದಿನದ ರಾಹುಕಾಲ ಮಧ್ಯಾಹ್ನ 2:00 ಗಂಟೆಯಿಂದ 3:28 ನಿಮಿಷದ ತನಕ ಇರುತ್ತದೆ. ಹಾಗೆಯೇ, ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಮತ್ತು ಶುಭಕಾಲವು ಮಧ್ಯಾಹ್ನ 12:33 ನಿಮಿಷದಿಂದ 1:59 ನಿಮಿಷದ ತನಕ ಸುಕರ್ಮ ಕಾಲ ರೂಪದಲ್ಲಿ ಇರುತ್ತದೆ. ಗುರುವಾರ ಗುರುಗಳ ಲಹರಿಗಳು ಇರತಕ್ಕಂತಹ ಅದ್ಭುತವಾದ ಮತ್ತು ವಿಶೇಷವಾದ ದಿನ ಇದಾಗಿದೆ. ಕೃಷ್ಣಪಕ್ಷದ ಚತುರ್ಥಿ ಇರುವುದರಿಂದ ಇದನ್ನು ಸಂಕಷ್ಟಿ ಚತುರ್ಥಿ ಎಂದು ಕರೆಯಲಾಗುತ್ತದೆ. ಶುಕ್ಲಪಕ್ಷದ ಚತುರ್ಥಿಯನ್ನು ವಿನಾಯಕಿ ಚತುರ್ಥಿ ಎಂದು ಕರೆಯುತ್ತಾರೆ. ಇಂದು ಸಂಕಷ್ಟ ಚತುರ್ಥಿ ಇರುವ ಕಾರಣ, ಬೆಳಗಿನ ಜಾವ ವಿನಾಯಕನ ಪೂಜೆ ಮಾಡಿ ಉಪವಾಸ ಆಚರಿಸಬೇಕು. ದಿನಪೂರ್ತಿ ವಿನಾಯಕನ ಆರಾಧನೆ ಮಾಡುವುದರಿಂದ ನಮ್ಮ ಸಂಕಲ್ಪಗಳು ಈಡೇರತಕ್ಕಂತಹ ಪರ್ವ ದಿನ ಇದಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಲಕ್ಕುಂಡಿಯಲ್ಲಿ ನಿಧಿ, ಕಪ್ಪತ್ತಗುಡ್ಡದ ಗುಹೆಯೊಳಗೆ ಬಂಗಾರದ ಗಣಿ
ಅಪಾರ್ಟ್ಮೆಂಟ್ ಲಿಫ್ಟ್ನೊಳಗೆ ಬಲೂನ್ಗಳ ಸ್ಫೋಟ; ಕಂಗಾಲಾದ ನಿವಾಸಿಗಳು
ಸಾಯಿ ಕುಮಾರ್ ಎದುರು ನಿಂತು ಸೈಲೆಂಟ್ ಆದ ಹೊಸ ಹೀರೋ; ಆಮೇಲೆ ಏನಾಯ್ತು?
ನಿವೃತ್ತಿ ಘೋಷಿಸಿದ ಬಳಿಕ ಅರಿಜಿತ್ ಸಿಂಗ್ ಮನವೊಲಿಸಲು ಆಮಿರ್ ಖಾನ್ ಪ್ರಯತ್ನ?

