Daily horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು

Updated on: May 03, 2025 | 7:05 AM

ಡಾ. ಬಸವರಾಜ ಗುರೂಜಿ 12 ರಾಶಿಗಳ ಫಲಗಳನ್ನು ತಿಳಿಸಿದ್ದಾರೆ. ಮೇಷ ರಾಶಿಯವರಿಗೆ ಆರು ಗ್ರಹಗಳ ಶುಭಫಲ, ವೃಷಭ ರಾಶಿಯವರಿಗೆ ಆಕಸ್ಮಿಕ ಧನಯೋಗ, ಮಿಥುನ ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸು, ಕರ್ಕಾಟಕ ರಾಶಿಯವರಿಗೆ ಮಾನಸಿಕ ಶಾಂತಿ ಮತ್ತು ಸಿಂಹ ರಾಶಿಯವರಿಗೆ ಕುಟುಂಬದಲ್ಲಿ ಸಹಕಾರ ಸಿಗುವುದು ಎಂದು ತಿಳಿಸಲಾಗಿದೆ.

ಬೆಂಗಳೂರು, ಮೇ 03: ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ 12 ರಾಶಿಗಳ ಫಲಗಳನ್ನು ವಿವರಿಸಿದ್ದಾರೆ. ಮೇಷ ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸು, ವಾಹನ ಯೋಗ ಮತ್ತು ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ವೃಷಭ ರಾಶಿಯವರಿಗೆ ಆಕಸ್ಮಿಕ ಧನ ಲಾಭ ಮತ್ತು ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಂಡುಬರಲಿದೆ. ಅದೇ ರೀರಿಯಾಗಿ ಪ್ರತಿಯೊಂದು ರಾಶಿಗೂ ಅದೃಷ್ಟ ಸಂಖ್ಯೆ ಮತ್ತು ಶುಭ ಬಣ್ಣಗಳನ್ನು ಸೂಚಿಸಿ, ಸೂಕ್ತ ಮಂತ್ರ ಪಠಣವನ್ನು ಸೂಚಿಸಲಾಗಿದೆ.